Wednesday, August 10, 2022
Home ಅಧ್ಯಾತ್ಮ ಸಾಮೂಹಿಕ ಸತ್ಯನಾರಾಯಣ ಪೂಜೆ

ಸಾಮೂಹಿಕ ಸತ್ಯನಾರಾಯಣ ಪೂಜೆ

ಸುದ್ದಿಕಿರಣ ವರದಿ
ಮಂಗಳವಾರ, ಫೆಬ್ರವರಿ 15

ಸಾಮೂಹಿಕ ಸತ್ಯನಾರಾಯಣ ಪೂಜೆ
ಉಡುಪಿ: ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಭಾನುವಾರ 24ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಗುಂಡಿಬೈಲು ಸಮೀಪದ ಬ್ರಾಹ್ಮೀ ಸಭಾ ಭವನದಲ್ಲಿ ನಡೆಯಿತು.

ಲೋಕ ಕಲ್ಯಾಣಾರ್ಥವಾಗಿ ನಡೆದ ಕಾರ್ಯಕ್ರಮ ವೇl ಮೂಡುಬೆಟ್ಟು ರಮೇಶ ಭಟ್ ನೇತೃತ್ವದಲ್ಲಿ ನಡೆಯಿತು.

ವಿಷ್ಣು ಸಹಸ್ರ ನಾಮ ಪಾರಾಯಣ, ಬ್ರಾಹ್ಮಣ ಸುಹಾಸಿನಿ ಆರಾಧನೆ, ವಿಪ್ರ ಮಹಿಳೆಯರಿಂದ ಭಜನೆ ಇತ್ಯಾದಿ ಕಾರ್ಯಕ್ರಮಗಳೊಂದಿಗೆ ಚೆಂಡೆ ವಾದನ, ಜಾಗಟೆಯ ನಿನಾದದೊಂದಿಗೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಪಾದೆಬೆಟ್ಟು ವಿಷ್ಣು ತಂಡದವರ ಪುಷ್ಪಾಲಂಕಾರ ಹಾಗೂ ರಾಜೇಶ್ ಭಟ್ ಪಣಿಯಾಡಿ ರಚಿಸಿದ ಪುಷ್ಪ ರಂಗವಲ್ಲಿ ಎಲ್ಲರ ಗಮನ ಸೆಳೆಯಿತು.

ಸಂಸ್ಥೆ ಅಧ್ಯಕ್ಷ ಚೈತನ್ಯ ಎಂ.ಜಿ. ದಂಪತಿ ನೇತೃತ್ವದಲ್ಲಿ ನಡೆದ ಪೂಜಾ ಕೈಂಕರ್ಯದ ಕೊನೆಯಲ್ಲಿ ಸೇವೆ ನೀಡಿದವರು, ದಾನಿಗಳನ್ನು ಗೌರವಿಸಲಾಯಿತು.

ನಂತರ ಈ ಪುಣ್ಯ ಕೈಂಕರ್ಯದಲ್ಲಿ ಪಾಲ್ಗೊಂಡ ನೂರಾರು ಮಂದಿ ಭಕ್ತಿ ಶ್ರದ್ಧೆಯಿಂದ ಪೂಜಿಸಿದ ಶ್ರೀ ಸತ್ಯನಾರಾಯಣ ದೇವರ ಅಷ್ಟ ಲಕ್ಷ್ಮಿಯರ ಕೆತ್ತನೆಯಿರುವ ಪುಣ್ಯೋಪೇತ ರಜತ ಕಲಶ ಜಲದ ಸಂಪ್ರೋಕ್ಷಣೆ ನಂತರ ಕಲಶವನ್ನು ಏಲಂ ಮಾಡಲಾಯಿತು.

ಅದನ್ನು ಯುವ ಬ್ರಾಹ್ಮಣ ಪರಿಷತ್ ಪೂರ್ವಾಧ್ಯಕ್ಷ ರಂಜನ ಕಲ್ಕೂರ ದಂಪತಿ ಯೋಗ್ಯ ಬೆಲೆಗೆ ಸ್ವೀಕರಿಸಿದರು.
ಆ ಹಣವನ್ನು ಅನೇಕ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು

ನೆರವು
ಈ ಸಂದರ್ಭದಲ್ಲಿ ಆರೋಗ್ಯ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿದ್ದ 3 ಮಂದಿ ಸಮಾಜ ಬಾಂಧವರಿಗೆ ಧನ ಸಹಾಯ ನೀಡಲಾಯಿತು.

ಐಕ್ಯಮತ್ಯ ಹೋಮ
ಇದೇ ಸಂದರ್ಭದಲ್ಲಿ ಸಮಸ್ತ ವಿಪ್ರ ಬಾಂಧವರ ಐಕ್ಯಮತ್ಯ ವೃದ್ಧಿಗಾಗಿ ಅದೇ ದಿನ ಮುಂಜಾನೆ ದೇವತಾ ಪ್ರಾರ್ಥನೆಯ ನಂತರ ಐಕ್ಯಮತ್ಯ ಹೋಮ ಹಾಗೂ ಭಾಗ್ಯ ಸೂಕ್ತ ಹೋಮ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ವಿಷ್ಣು ಪಾಡಿಗಾರ ನೇತೃತ್ವದಲ್ಲಿ ನಡೆಯಿತು.

ಮಾಜಿ ಅಧ್ಯಕ್ಷ ಉದ್ಯಮಿ ಕೆ. ಎಂ. ಉಡುಪ ಪ್ರಾಯೋಜಕತ್ವದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!