Wednesday, July 6, 2022
Home ಅಧ್ಯಾತ್ಮ ಬನ್ನಂಜೆ ಶನಿ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ

ಬನ್ನಂಜೆ ಶನಿ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ

ಉಡುಪಿ: ಇಲ್ಲಿನ ಬನ್ನಂಜೆ ಶ್ರೀ ಶನೈಶ್ಚರ ದೇವರ 23 ಅಡಿ ಎತ್ತರದ ಏಕಶಿಲಾ ಮೂರ್ತಿ ಸನ್ನಿಧಾನದಲ್ಲಿ ವಾರ್ಷಿಕ ಮಹೋತ್ಸವ ಬನ್ನಂಜೆ ಶ್ರೀ ರಾಘವೇಂದ್ರತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಸಂಭ್ರಮದಿಂದ ನಡೆಯಿತು.
ಕ್ಷೇತ್ರದ ಶ್ರೀರಾಮ ವಿಠಲ ಹಾಗೂ ಶನೈಶ್ಚರಸ್ವಾಮಿ ಸನ್ನಿಧಿಯಲ್ಲಿ ಲಲಿತಾ ಸೂಕ್ತ ಪುರಸ್ಸರ ಶನಿಶಾಂತಿ ಕೊರಂಗ್ರಪಾಡಿ ಕುಮಾರಗುರು ತಂತ್ರಿ ನೇತೃದಲ್ಲಿ ನಡೆಯಿತು.

ಸಾಮೂಹಿಕ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ಯಾಗ ಪೂರ್ಣಾಹುತಿ, ಪಲ್ಲಪೂಜೆ, ಮಂಡಲಪೂಜೆ, ಉತ್ಸವ ಬಲಿ, ಸಾರ್ವಜನಿಕ ಅನ್ನಸಂತರ್ಣಣೆ ಇತ್ಯಾದಿ ನಡೆದಿದ್ದು, ಸುಮಾರು 2 ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.

ಭಕ್ತರು ಶನಿದೇವರಿಗೆ ತೈಲಾಭಿಷೇಕ, ಎಳ್ಳು ದೀಪ ಬೆಳಗಿದರು.

ಸತ್ಯನಾರಾಯಣ ಆಚಾರ್ಯ, ಜಯಲಕ್ಷ್ಮೀ ಆಚಾರ್ಯ, ಪ್ರಹ್ಲಾದ ಆಚಾರ್ಯ, ಯತೀಶ್ ಆಚಾರ್ಯ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!