Saturday, August 13, 2022
Home ಅಧ್ಯಾತ್ಮ ಪಲಿಮಾರು ವಿದ್ಯಾಮಾನ್ಯತೀರ್ಥರ ಆರಾಧನೆ

ಪಲಿಮಾರು ವಿದ್ಯಾಮಾನ್ಯತೀರ್ಥರ ಆರಾಧನೆ

ಉಡುಪಿ: ಪಡುಬಿದ್ರಿ ಸಮೀಪದ ಪಲಿಮಾರು ಮೂಲಮಠದಲ್ಲಿ ವೇದವ್ಯಾಸ ಜಯಂತಿ ಮತ್ತು ವಸಂತ ದ್ವಾದಶಿ ಹಾಗೂ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ 21ನೇ ಆರಾಧನ ಮಹೋತ್ಸವ ಕೋವಿಡ್ ಮಾರ್ಗಸೂಚಿ ಪ್ರಕಾರ ಸಾಂಪ್ರದಾಯಿಕ ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.

ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರಿಪಾದರು ಇದ್ದರು.

ಆಚಾರ್ಯ ಮಧ್ವ ವಿರಚಿತ ಸರ್ವಮೂಲ ಗ್ರಂಥ ಹಾಗೂ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಭಾವಚಿತ್ರದ ರಥೋತ್ಸವವನ್ನೂ ಸಾಂಕೇತಿಕವಾಗಿ ನಡೆಸಲಾಯಿತು. ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಭಾಗವಹಿಸಿದ್ದರು.

ಕಾರ್ಯಕ್ರಮದಂಗವಾಗಿ ನಡೆದ ಜಾನಯಜ್ಞ ಕಾರ್ಯಕ್ರಮ ಅನ್ ಲೈನ್ ಮಾಧ್ಯಮದ ಮೂಲಕ ನಡೆದಿದ್ದು, 34 ಮಂದಿ ವಿದ್ವಾಂಸರು ಭಾಗವಹಿಸಿದ್ದರು.

ಐವರು ಪೀಠಾಧಿಪತಿಗಳು, ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ವೃಂದಾವನ ಪೂಜೆ ನಡೆಸಿದರು. ಸಂಜೆ ವಸಂತ ಪೂಜೆ ನಡೆಯಿತು.

ಪಲಿಮಾರು ಮಠದ ದಿವಾನ ವೇದವ್ಯಾಸ ತಂತ್ರಿ, ಶ್ರೀಪಾದರ ಆಪ್ತ ಕಾರ್ಯದರ್ಶಿ ಗಿರೀಶ್ ಉಪಾಧ್ಯಾಯ, ಮಠದ ಕೊಟ್ಟಾರಿ ಹರೀಶ್ ರಾವ್, ಅಂತರ್ಜಾಲ ವ್ಯವಸ್ಥೆ ಮಾಡಿದ ಜನಾರ್ದನ ಭಟ್ ಇದ್ದರು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!