ಉಡುಪಿ: ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಈ ತಿಂಗಳ 24, ಗುರುಪೂರ್ಣಿಮಾ ದಿನದಂದು ಚಾತುರ್ಮಾಸ್ಯ ವ್ರತದೀಕ್ಷೆ ಕೈಗೊಳ್ಳಲಿದ್ದಾರೆ. ಉತ್ಥಾನ ದ್ವಾದಶಿ ವರೆಗೆ 4 ತಿಂಗಳ ಕಾಲ ಕೃಷ್ಣಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಮಾಡಲಿದ್ದಾರೆ.
ಶ್ರೀಕೃಷ್ಣ ಮಹಾಭಿಷೇಕ
ಶ್ರೀಕೃಷ್ಣಮಠದಲ್ಲಿ ವಾರ್ಷಿಕ ಸ್ವಚ್ಛತಾ ಕಾರ್ಯಕ್ರಮ ಉದ್ವರ್ತನ ಜು. 17ರಂದು ನಡೆಯಲಿದೆ.
ಜು. 19 ಆಷಾಢ ಶುದ್ಧ ದಶಮಿಯಂದು ಶ್ರೀಕೃಷ್ಣನಿಗೆ ಮಹಾಭಿಷೇಕ ನಡೆಯಲಿದೆ. ಸೀಯಾಳ ತಂದೊಪ್ಪಿಸುವವರು ಜು. 18ರ ಸಂಜೆ 4 ಗಂಟೆಯೊಳಗೆ ಕೃಷ್ಣಮಠದ ಉತ್ತರ ದ್ವಾರದಲ್ಲಿ ನೀಡಬಹುದು ಎಂದು ಮಠದ ಪ್ರಕಟಣೆ ತಿಳಿಸಿದೆ.
ತಪ್ತ ಮುದ್ರಾಧಾರಣೆ
ಜು. 20 ಆಷಾಢ ಏಕಾದಶಿಯಂದು ಕೃಷ್ಣಮಠದಲ್ಲಿ ತಪ್ತ ಮುದ್ರಾಧಾರಣೆ ನಡೆಯಲಿದ್ದು, ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭಕ್ತರಿಗೆ ಮುದ್ರಾಧಾರಣೆ ಮಾಡುವರು.
ಅಂದು ಬೆಳಿಗ್ಗೆ 11ರಿಂದ ರಾಜಾಂಗಣದಲ್ಲಿ ಮುದ್ರಾಧಾರಣೆ ಆರಂಭಗೊಳ್ಳಲಿದ್ದು, ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಬೇಕು ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ