Thursday, July 7, 2022
Home ಅಧ್ಯಾತ್ಮ ಉಡುಪಿ ಉತ್ತರಾದಿಮಠದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ

ಉಡುಪಿ ಉತ್ತರಾದಿಮಠದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ

ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
******************************

(ಸುದ್ದಿಕಿರಣ ವರದಿ)

ಉಡುಪಿ, ಜು. 9: ಇಲ್ಲಿನ ರಥಬೀದಿ ಉತ್ತರಾದಿಮಠದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬವನ್ನು ಇಂದು ಆಚರಿಸಲಾಯಿತು.

ಉತ್ತರ ಕರ್ನಾಟಕದ ವಿಶೇಷ ಆಚರಣೆಗಳಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯೂ ಒಂದು. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಗದ್ದೆಯಲ್ಲಿ ಬಿತ್ತನೆ ಮಾಡುವ ಮೊದಲ ಅಮಾವಾಸ್ಯೆಯ ದಿನ ಇದಾಗಿದೆ. ಜೋಡು ಎತ್ತುಗಳ ಮೃತ್ತಿಕಾ ಮೂರ್ತಿಯನ್ನು ರಚಿಸಿ ಅದಕ್ಕೆ ಸಂಪ್ರದಾಯದಂತೆ ಪೂಜೆ ನಡೆಸುವ ವಿಧಾನ ಇದಾಗಿದೆ.

ಮಠದ ಪ್ರಧಾನ ಅರ್ಚಕ ಪ್ರಕಾಶ ಆಚಾರ್ಯ ನೇತೃತ್ವದಲ್ಲಿ ಮಣ್ಣೆತ್ತಿನ ಮೂರ್ತಿ ರಚಿಸಿ, ವಿಧಿ ವಿಧಾನಗಳೊಂದಿಗೆ ಪೂಜೆ ನಡೆಸಲಾಯಿತು.

ಉತ್ತರ ಕರ್ನಾಟಕ ಭಾಗದಲ್ಲಿ ಇಂದಿನಿಂದ ಪ್ರತೀ ನಾಲ್ಕು ಮಂಗಳವಾರಗಳಂದು ಮೃತ್ತಿಕಾ ಮೂರ್ತಿ ರಚಿಸಿ, ಆ ದಿನ ಸಂಜೆ ಪೂಜೆ ಮಾಡಿ ಮರುದಿನ ಸಿಹಿ ಅಡುಗೆಯೊಂದಿಗೆ ಹಿರಿ- ಕಿರಿಯರೆಲ್ಲರೂ ಗದ್ದೆಗಳಿಗೆ ತೆರಳಿ, ಉತ್ಸಾಹದಿಂದ ಸಂಭ್ರಮಿಸಿ ಈ ಹಬ್ಬಕ್ಕೆ ಸಂಬಂಧಪಟ್ಟ ಜಾನಪದ ಹಾಡುಗಳನ್ನು ಹಾಡುತ್ತಾ ಸಂತಸಪಡುತ್ತಾರೆ. ಬಳಿಕ ಗದ್ದೆಯಲ್ಲಿಯೇ ಊಟ ಮಾಡುತ್ತಾರೆ. ಗದ್ದೆಯಲ್ಲಿಯೇ ಮೃತ್ತಿಕಾ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ.

ತಮ್ಮ ಹೊಲ ಗದ್ದೆಗಳಲ್ಲಿ ಉತ್ತಮ ಫಸಲು ಬರಲೆಂಬ ಆಶಯದ ಆದಿಮ ಸಂಸ್ಕೃತಿಯ ಪುರಾತನ ಕಾಲದಿಂದಲೂ ಆಚರಿಸಲ್ಪಡುವ ಹಬ್ಬ ಇದಾಗಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!