Wednesday, August 10, 2022
Home ಅಧ್ಯಾತ್ಮ ಅಶ್ವತ್ಥಪುರ ಶ್ರೀರಾಮನಿಗೆ ವಿಶೇಷ ಅಲಂಕಾರ

ಅಶ್ವತ್ಥಪುರ ಶ್ರೀರಾಮನಿಗೆ ವಿಶೇಷ ಅಲಂಕಾರ

ಮೂಡುಬಿದಿರೆ: ಅವಿಭಜಿತ ದ.ಕ. ಜಿಲ್ಲೆಯ ಪುರಾತನ ಶ್ರೀರಾಮ ಆಲಯ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಆಷಾಢ ಏಕಾದಶಿಯಂದು ಶ್ರೀದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ನಿತ್ಯವೂ ಕಿರೀಟ ಕುಂಡಲಗಳಿಂ ಸುಶೋಭಿತನಾದ ಅಶ್ವತ್ಥಪುರವರ ಇಂದು ತಲೆಗೆ ರುಮಾಲು ಸುತ್ತಿ ವಿಶಿಷ್ಟವಾಗಿ ದರ್ಶನ ನೀಡಿದ.

ಒಂದು ರೀತಿಯಲ್ಲಿ ಶ್ರೀಕ್ಷೇತ್ರ ಅಶ್ವತ್ಥಪುರ ಶ್ರೀರಾಮ ದೇವರಲ್ಲೂ ಪಂಢರೀನಾಥ ಪಾಂಡುರಂಗನ ದರ್ಶನ ಭಾಗ್ಯ! ಇದು ಲಾಗಾಯ್ತಿನಿಂದಲೂ ಆಷಾಢ ಏಕಾದಶಿ ಸಹಿತ ಪ್ರತೀ ಏಕಾದಶಿಯಂದು ಈ ರೀತಿಯಲ್ಲಿ ಅಲಂಕರಿಸಿ ಪೂಜಿಸಿಕೊಂಡು ಬಂದ ಕ್ರಮ.

ಅಖಂಡ ನಾಮ ಸಪ್ತಾಹ

ಜೊತೆಗೆ ಕ್ಷೇತ್ರದಲ್ಲಿ ಗುರುಪೂರ್ಣಿಮಾ ಅಂಗವಾಗಿ ಅಖಂಡ ನಾಮ ಸಪ್ತಾಹ ನಡೆಯುತ್ತಿದ್ದು, ಕಳೆದ 17ರಿಂದ ಆರಂಭವಾದ ಅಹೋರಾತ್ರಿಯ ಅಖಂಡ ನಾಮ ಸಪ್ತಾಹದ ಮಂಗಲಾಚರಣೆ ಜು. 24ರಂದು ನಡೆಯಲಿದೆ.

ಈ ರೀತಿಯ ನಾಮಸಪ್ತಾಹ ವರ್ಷದಲ್ಲಿ ನಾಲ್ಕು ಬಾರಿ ಶ್ರೀಕ್ಷೇತ್ರದಲ್ಲಿ ನಡೆಯುತ್ತದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!