ನೀರಜ್ ಛೋಪ್ರಾಗೆ ಬಂಗಾರ: ಉಡುಪಿಯಲ್ಲೂ ಥ್ಯೋಹಾರ
(ಸುದ್ದಿಕಿರಣ ವರದಿ)
ಉಡುಪಿ: ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಎಸೆತದಲ್ಲಿ ಸುಬೇದಾರ್ ನೀರಜ್ ಛೋಪ್ರಾ ಚಿನ್ನದ ಪದಕ ಗೆದ್ದು, ಒಲಿಂಪಿಕ್ಸ್ ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ನೀಡಿದ ಖುಷಿಯಲ್ಲಿ ಇಲ್ಲಿನ ಸ್ವಚ್ಛ ಭಾರತ್ ಫ್ರೆಂಡ್ಸ್ ಸದಸ್ಯರು ಅಜ್ಜರಕಾಡು ಯುದ್ಧ ಸ್ಮಾರಕ ಬಳಿ ಭಾನುವಾರ ತ್ರಿವರ್ಣ ಧ್ವಜ ಹಿಡಿದು, ಘೋಷಣೆ ಕೂಗಿ ಸರಳ ರೀತಿಯಲ್ಲಿ ಥ್ಯೋಹಾರ (ಸಂಭ್ರಮಾಚರಣೆ) ನಡೆಸಿದರು.
ಕ್ಲೀನ್ ಉಡುಪಿ ಪ್ರಾಜೆಕ್ಟ್ ಸಂಚಾಲಕ ಡಾ. ಆರ್. ಎನ್. ಭಟ್ ಅವರು ನೀರಜ್ ಛೋಪ್ರಾ ಸಾಧನೆಯ ಸವಿನೆನಪಿಗಾಗಿ ಸಸಿಗಳನ್ನು ನೆಟ್ಟರು.
ಜಗದೀಶ್ ಶೆಟ್ಟಿ, ಸಂತೋಷ್ ನಾಯ್ಕ್, ರಾಘವೇಂದ್ರ ಪ್ರಭು ಕರ್ವಾಲು, ನಾಗರಾಜ್ ಕಿದಿಯೂರು, ಉದಯ ನಾಯ್ಕ್, ಗಣೇಶ್ ಪ್ರಸಾದ್ ಜಿ. ನಾಯಕ್ ಮೊದಲಾದವರಿದ್ದರು.