Thursday, July 7, 2022
Home ಕ್ರೀಡೆ ಒಲಿಂಪಿಕ್ಸ್ ಮೊದಲ ತಂಡ ಪಯಣ

ಒಲಿಂಪಿಕ್ಸ್ ಮೊದಲ ತಂಡ ಪಯಣ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಶನಿವಾರ ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಏರ್ ಪೋರ್ಟ್ ನಿಂದ ಭಾರತದ ಮೊದಲ ತಂಡ ಹೊರಡಲಿದೆ. ್ಯಚ್?? ಕ್ರೀಡಾಪಟುಗಳಿಗೆ ಔಪಚಾರಿಕ ಬಿಳ್ಕೊಡುಗೆ ಸಮಾರಂಭ ಏರ್ಪಾಡಾಗಿದೆ.

ಒಟ್ಟು 88 ಮಂದಿ ಇರುವ ತಂಡ ಇದಾಗಿದ್ದು, ಅದರಲ್ಲಿ 54 ಮಂದಿ ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಪ್ರತಿನಿಧಿಗಳು ಸೇರಿದ್ದಾರೆ. ಈ ಸದಸ್ಯರಿಗೆ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಔಪಚಾರಿಕೆ ಬೀಳ್ಕೊಡುಗೆ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ನಿಸಿತ್ ಪ್ರಾಮಾಣಿಕ್ ಕೂಡಾ ಭಾಗವಹಿಸುವರು.

ಆರ್ಚರಿ, ಹಾಕಿ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಜುಡೋ, ಜಿಮ್ನಾಸ್ಟಿಕ್ಸ್ ಹಾಗೂ ವೈಟ್ ಲಿಫ್ಟಿಂಗ್ ಎಂಬ 8 ಕ್ರೀಡೆಗಳ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಇಂದು ದೆಹಲಿಯಿಂದ ಟೋಕಿಯೊಗೆ ನೆಗೆಯಲಿದ್ದಾರೆ.

ಆಟಗಾರರ ಸುರಕ್ಷತೆ ಗಮನದಲ್ಲಿರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಗಣ್ಯ ವ್ಯಕ್ತಿಗಳಿಗೂ ಕೋವಿಡ್ ಪರೀಕ್ಷೆ ಮಾಡಲಾಗಿದೆ. ನೆಗೆಟಿವ್ ವರದಿ ಹೊಂದಿರುವವರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವ್ಯಕ್ತಿಗತ ಅಂತರ, ಫೇಸ್ ಮಾಸ್ಕ್ ಸೇರಿದಂತೆ ಕೊರೊನಾ ಮಾರ್ಗಸೂಚಿಗಳನ್ನು ಈ ಕಾರ್ಯಕ್ರಮದಲ್ಲಿ ಪಾಲಿಸಲಾಗುತ್ತದೆ.

ಈ ಬಾರಿ ಒಲಿಂಪಿಕ್ಸ್ ನಲ್ಲಿ 127 ಮಂದಿ ಭಾರತೀಯ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದೂ ಒಂದು ದಾಖಲೆಯಾಗಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!