Saturday, August 13, 2022
Home ಕ್ರೀಡೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಮೊದಲ ಸಿಸಿಎಲ್ ಪ್ರಶಸ್ತಿ

ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಮೊದಲ ಸಿಸಿಎಲ್ ಪ್ರಶಸ್ತಿ

ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಮೊದಲ ಸಿಸಿಎಲ್ ಪ್ರಶಸ್ತಿ

ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆ ಆಶ್ರಯದಲ್ಲಿ ಕಾರ್ಪೊರೇಟ್ ಕಂಪನಿ, ಬ್ಯಾಂಕುಗಳು, ವೈದ್ಯಕೀಯ ಸಂಘ, ಆಸ್ಪತ್ರೆಗಳು ಮತ್ತು ಮಾಧ್ಯಮ ಮಿತ್ರರಿಗಾಗಿ 3 ದಿನಗಳ ಕಾಲ ನಡೆದ ಸೌಹಾರ್ದ ಕಾರ್ಪೊರೇಟ್ ಕ್ರಿಕೆಟ್ ಲೀಗ್ (ಸಿಸಿಎಲ್)ನಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆ ತಂಡ ಮೊದಲ ಸಿಸಿಎಲ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಭಾನುವಾರ ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಕೆ ಕೆ ಫಿಶ್ ನೆಟ್ಸ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಬಾಳಿಗ ಭಾಗವಹಿಸಿದ್ದರು. ಕ್ರೀಡಾಕೂಟಗಳು ಸಂಸ್ಥೆಗಳ ನಡುವೆ ಸ್ನೇಹದ ಸೇತುವೆಯಾಗಲಿದೆ ಎಂದರು.

ಗೌರವ ಅತಿಥಿ ಆರೋಗ್ಯ ವಿಜ್ಞಾನ ವಿಭಾಗ ಸಹ ಕುಲಪತಿ ಡಾ. ಪಿ.ಎಲ್.ಎನ್ ಜಿ ರಾವ್, ಇನ್ನಷ್ಟು ಬೇರೆ ಬೇರೆ ರೀತಿಯ ಕ್ರೀಡಾಕೂಟಗಳು ನಡೆಯಬೇಕು ಎಂದು ಆಶಿಸಿದರು.

ಕೆಎಂಸಿ ಡೀನ್ ಡಾ. ಶರತ್ ಕೆ. ರಾವ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಸಿಒಒ ಸಿ. ಜಿ. ಮುತ್ತಣ್ಣ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಇದ್ದರು.

ಮಾಹೆ ಮಣಿಪಾಲ ರನ್ನರ್ ಆಪ್ ಪ್ರಶಸ್ತಿ ಪಡೆಯಿತು. ಅವಿನಾಶ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ವಿನಯ್ ಪಂದ್ಯ ಶ್ರೇಷ್ಠ, ವಿಘ್ನೇಶ್ ಉತ್ತಮ ದಾಂಡಿಗ ಮತ್ತು ವಿನಯ್ ಉತ್ತಮ ದಾಳಿಗಾರ ಪ್ರಶಸ್ತಿಗೆ ಪಾತ್ರರಾದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!