ನೀರಜ್ ಛೋಪ್ರಾ ಸಾಧನೆಗೆ ಪೇಜಾವರಶ್ರೀ ಹರ್ಷ
(ಸುದ್ದಿಕಿರಣ ವರದಿ)
ಬೆಂಗಳೂರು: ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನ ತಂದಿತ್ತ ನೀರಜ್ ಛೋಪ್ರಾ ಸಾಧನೆಯನ್ನು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಶಂಸಿಸಿದ್ದಾರೆ.
ಅವರಿಗೆ ಅಭಿನಂದನಾಪೂರ್ವಕ ಆಶೀರ್ವಾದ ಮಾಡಿರುವ ಶ್ರೀಪಾದರು, ಛೋಪ್ರಾ ಸಾಧನೆ ದೇಶದ ಅನೇಕ ಯುವಕರಿಗೆ ಪ್ರೇರಣೆಯಾಗಲಿ. ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯಾಗಲು ಇದು ಪೂರಕವಾಗಲಿ ಎಂದು ಆಶಿಸಿದ್ದಾರೆ