Tuesday, May 17, 2022
Home ಕ್ರೀಡೆ ವೃತ್ತಿಪರ ಬಾಕ್ಸಿಂಗ್ ಕೂಟ ಆಯೋಜನೆಗೆ ಸಿದ್ಧತೆ

ವೃತ್ತಿಪರ ಬಾಕ್ಸಿಂಗ್ ಕೂಟ ಆಯೋಜನೆಗೆ ಸಿದ್ಧತೆ

ಸುದ್ದಿಕಿರಣ ವರದಿ
ಶನಿವಾರ, ಫೆಬ್ರವರಿ 19

ವೃತ್ತಿಪರ ಬಾಕ್ಸಿಂಗ್ ಕೂಟ ಆಯೋಜನೆಗೆ ಸಿದ್ಧತೆ
ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮೊತ್ತ ಮೊದಲ ಬಾರಿಗೆ ಕರಾವಳಿ ಭಾಗದಲ್ಲಿ ವೃತ್ತಿಪರ ಬಾಕ್ಸಿಂಗ್ ಕೂಟವೊಂದನ್ನು ಮುಂದಿನ ಏಪ್ರಿಲ್ ತಿಂಗಳಲ್ಲಿ ಆಯೋಜಿಸಲಿದೆ ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಪ್ರಕಟಿಸಿದ್ದಾರೆ.

ಈ ಸಂಬಂಧ ಮಣಿಪಾಲಕ್ಕೆ ಭೇಟಿ ನೀಡಿದ ಭಾರತದ ಪ್ರಮುಖ ವೃತ್ತಿಪರ ಬಾಕ್ಸರ್ ನೀರಜ್ ಗೋಯತ್ ಅವರೊಂದಿಗೆ ಚರ್ಚಿಸಿಸಿದ ಬಳಿಕ ಅವರು ಈ ವಿಷಯ ಪ್ರಕಟಿಸಿದರು.

ಬಾಕ್ಸಿಂಗ್ ಕೂಟ ಮುಂದಿನ ಎಪ್ರಿಲ್ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದ್ದು, ಅದರಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಬಾಕ್ಸರ್ ಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ನೀರಜ್ ಗೋಯತ್ 2008ರಲ್ಲಿ ಭಾರತದ ಉದಯೋನ್ಮುಖ ಬಾಕ್ಸರ್ ಪ್ರಶಸ್ತಿ ಪಡೆದಿದ್ದರು. ಡಬ್ಲ್ಯೂ.ಬಿ.ಸಿ ವಿಶ್ವ ರ್ಯಾಂಕಿಂಗ್ ನಲ್ಲಿ ಸ್ಥಾನ ಪಡೆದ ಮೊತ್ತಮೊದಲ ವೃತ್ತಿಪರ ಬಾಕ್ಸರ್ ಅವರಾಗಿದ್ದಾರೆ. ನೀರಜ್ ಅವರು ಮಾಹೆ ಸಹಯೋಗದೊಂದಿಗೆ ಮಣಿಪಾಲದಲ್ಲಿ ಮೆಗಾ ವೃತ್ತಿಪರ ಬಾಕ್ಸಿಂಗ್ ಪ್ರದರ್ಶನ ಏರ್ಪಡಿಸಲಿದ್ದಾರೆ.

ಗೋಯತ್ ಅವರು ಮಾಹೆಗೆ ಭೇಟಿ ನೀಡಿ, ಅಲ್ಲಿನ ಮರಿನಾ ಒಳಾಂಗಣ ಕ್ರೀಡಾ ಸಂಕೀರ್ಣ ವೀಕ್ಷಿಸಿದರು. ಮಾಹೆಯಲ್ಲಿರುವ ಕ್ರೀಡಾ ಸೌಲಭ್ಯಗಳನ್ನು ವೀಕ್ಷಿಸಿ ಅಚ್ಚರಿಗೊಂಡರು.

ಈ ಸಂದರ್ಭದಲ್ಲಿ ಅವರು ಮಾಹೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಹಲವು ಸವಾಲುಗಳನ್ನು ಎದುರಿಸಲು ಇದು ಶಕ್ತಿ ತುಂಬಲಿದ್ದು, ಸ್ಪೂರ್ತಿಯ ಚಿಲುಮೆಯಾಗಿದೆ ಎಂದರು.

ಮಾಹೆ ಕುಲಪತಿ ಲೆ| ಜ| ಡಾ| ಎಂ. ಡಿ. ವೆಂಕಟೇಶ್ ಮಾತನಾಡಿ, ಕ್ರೀಡೆ ಪ್ರತಿಯೊಬ್ಬರ ವೈಯಕ್ತಿಕ ವ್ಯಕ್ತಿತ್ವದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ನಮ್ಮೆಲ್ಲಾ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತೇವೆ. ನಮ್ಮ ವಿದ್ಯಾರ್ಥಿಗಳೂ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ಮಾಹೆ ರಿಜಿಸ್ಟ್ರಾರ್ ಡಾ| ನಾರಾಯಣ ಸಭಾಹಿತ್, ಮಾಹೆ ಸಾರ್ವಜನಿಕ ಹಾಗೂ ಪತ್ರಿಕಾ ಸಂಪರ್ಕ ನಿರ್ದೇಶಕ ಎಸ್. ಪಿ. ಕರ್, ಕ್ರೀಡಾ ಕೌನ್ಸಿಲ್ ಕಾರ್ಯದರ್ಶಿ ಡಾ| ವಿನೋದ್ ನಾಯಕ್, ಜಂಟಿ ಕಾರ್ಯದರ್ಶಿ ಡಾ| ಶೋಭಾ ಈರಪ್ಪ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!