ಭಾವಾನುವಾದ ಪುಸ್ತಕ ಅನಾವರಣ
(ಸುದ್ದಿಕಿರಣ ವರದಿ)
ಉಡುಪಿ: ಇಲ್ಲಿನ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಪ್ರಕಟಿಸಿರುವ ಶೈಲಜಾ ಸದಾಶಿವ ಅಡಿಗ ಸಂಪಾದಿತ ಕೃತಿ ಭಗವದ್ಗೀತೆ, ವಿಷ್ಣು ಸಹಸ್ರನಾಮ, ಭೀಷ್ಮಸ್ತವರಾಜ, ಗಜೇಂದ್ರ ಮೋಕ್ಷ ಹಾಗೂ ಅನುಸ್ಮೃತಿಯ ಭಾವಾನುವಾದ ಹಾಗೂ ಫಲಶೃತಿಗಳನ್ನೊಳಗೊಂಡ ಪುಸ್ತಕ ಭಾನುವಾರ ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಬಿಡುಗಡೆಗೊಂಡಿತು.
ಯೋಗ ಗುರು, ವಿದ್ವಾನ್ ಡಾ| ವಿಜಯಕುಮಾರ್ ಮಂಜರ್ ಪುಸ್ತಕ ಅನಾವರಣಗೊಳಿಸಿ, ಪ್ರತಿಯೊಬ್ಬರೂ ಜೀವನದಲ್ಲಿ ಭಗವದ್ಗೀತೆ ಓದಿ ಅರ್ಥೈಸಿಕೊಳ್ಳುವುದು ಅತಿ ಅವಶ್ಯಕ ಎಂದರು.
ಗುಂಡ್ಮಿ ಶಂಕರನಾರಾಯಣ ಅಡಿಗ ಕೃತಿ ಪರಿಚಯಿಸಿದರು.
ಸಂಸ್ಕೃತಿ ಪ್ರತಿಷ್ಠಾನ ಗೌರವಾಧ್ಯಕ್ಷ ಯು. ವಿಶ್ವನಾಥ ಶೆಣೈ, ವಾಸುದೇವಾಚಾರ್ಯ, ಪಶುಪತಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್, ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ್ ಭಟ್ ಮೊದಲಾದವರಿದ್ದರು.
ಶೈಲಾ ಅಡಿಗ ಸ್ವಾಗತಿಸಿ, ಪ್ರತಿಷ್ಠಾನದ ಉಪಾಧ್ಯಕ್ಷ ವಿಘ್ನೇಶ್ವರ ಅಡಿಗ ನಿರೂಪಿಸಿದರು