Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ದುರ್ಗಾಂಬಾ ಯಕ್ಷಗಾನ ಕಲಾಮಂಡಳಿ ಪ್ರಾರಂಭ

ದುರ್ಗಾಂಬಾ ಯಕ್ಷಗಾನ ಕಲಾಮಂಡಳಿ ಪ್ರಾರಂಭ

ದುರ್ಗಾಂಬಾ ಯಕ್ಷಗಾನ ಕಲಾಮಂಡಳಿ ಪ್ರಾರಂಭ
(ಸುದ್ದಿಕಿರಣ ವರದಿ)

ಮಣಿಪಾಲ: ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಸ್ಥಾಪಿತವಾದ ದುರ್ಗಾಂಬಾ ಯಕ್ಷಗಾನ ಕಲಾಮಂಡಳಿ ಈಚೆಗೆ ಇಲ್ಲಿನ ಶ್ರೀ ದುರ್ಗಾಂಬಾ ಮಂದಿರದಲ್ಲಿ ಉದ್ಘಾಟನೆಗೊಂಡಿತು.

ಯಕ್ಷಗಾನ ಕಲಾಮಂಡಳಿ ಅಧ್ಯಕ್ಷ, ಸೆಲ್ಕೊ ಸೋಲಾರ್ ಮಹಾಪ್ರಬಂಧಕ ಜಗದೀಶ್ ಪೈ ಕೇಂದ್ರವನ್ನು ಉದ್ಘಾಟಿಸಿದರು.

ಈ ಕೇಂದ್ರದ ಮೂಲಕ ತರಬೇತುಗೊಂಡ ಹೆಚ್ಚಿನ ಹವ್ಯಾಸಿ ಕಲಾವಿದರು ಮಹಿಳೆಯರಾಗಿದ್ದು, ಕೊಂಕಣಿ ಭಾಷೆಯಲ್ಲಿ ಯಕ್ಷಗಾನ ಪ್ರಸಂಗವನ್ನು ಈಗಾಗಲೇ ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ. ವಾರಕ್ಕೆ ಒಂದು ದಿನ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಉಚಿತವಾಗಿ ಯಕ್ಷಗಾನ ತರಬೇತಿ ನೀಡಲಾಗುವುದು. ಖ್ಯಾತ ಯಕ್ಷಗಾನ ಕಲಾವಿದ ರತ್ನಾಕರ ಶೆಣೈ ಶಿವಪುರ ತರಬೇತಿ ನೀಡಲಿದ್ದು, ಆಸಕ್ತರು ಕೇಂದ್ರವನ್ನು ಸಂಪರ್ಕಿಸಬಹುದು ಎಂದರು.

ಉಡುಪಿ ಅನಂತ ವೈದಿಕ ಕೇಂದ್ರದ ಚೇಂಪಿ ರಾಮಚಂದ್ರ ಭಟ್ ಮತ್ತು ಶ್ರೀ ದುರ್ಗಾಂಬಾ ಮಂದಿರದ ಆಡಳಿತ ವಿಶ್ವಸ್ಥ ಶಿವಾನಂದ ಭಟ್ ಶುಭ ಹಾರೈಸಿದರು.
ಯಕ್ಷಗಾನ ಕಲಾವಿದ ಮತ್ತು ಗುರು ರತ್ನಾಕರ ಶೆಣೈ ಶಿವಪುರ, ಉಡುಪಿ ಶ್ರೀ ದುರ್ಗಾಂಬಾ ಭಜನಾ ಮಂಡಳಿ ಅಧ್ಯಕ್ಷ ಬಿ. ಕೆ ವಾಸುದೇವ ಪೈ ಮತ್ತು ನಿರ್ಮಲಾ ಪೈ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!