Wednesday, August 10, 2022
Home ಮನರಂಜನೆ ಎಣ್ಣೆಹೊಳೆ ನದಿತಟದಲ್ಲಿ ಸ್ವರ್ಣಾರತಿ

ಎಣ್ಣೆಹೊಳೆ ನದಿತಟದಲ್ಲಿ ಸ್ವರ್ಣಾರತಿ

ಕಾರ್ಕಳ: ಎಣ್ಣೆಹೊಳೆ ದೇವಾಲಯದ ಸ್ವರ್ಣಾ ನದಿ ತಟದಲ್ಲಿ ವೈಭವದ ಸ್ವರ್ಣಾರತಿ ಕಾರ್ಯಕ್ರಮ ನಡೆಯಿತು.

ಗೋವಾ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ದೇವಾಲಯದ ಎದುರು ಬಿಲ್ವಪತ್ರೆ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ನಂತರ ನದಿ ತೀರದಲ್ಲಿ ವೈಭವದ ಸ್ವರ್ಣಾರತಿ ನಡೆಯಿತು.

ಯೋಜನೆ ಅತ್ಯಂತ ಯಶಸ್ವಿಯಾಗಲಿ ಎಂದು ಶ್ರೀಗಳು ಆಶೀರ್ವದಿಸಿದರು.

ಅಭಿಯಾನ ಪ್ರಮುಖರಾದ ಡಾ. ನಾರಾಯಣ ಶೆಣೈ, ಪ್ರಭಾಕರ ಭಟ್, ದೇವಾಲಯದ ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

ಸ್ವರ್ಣಾ ನದಿಯ ಪಾವಿತ್ರ್ಯ ಮತ್ತು ಸ್ವಚ್ಛತೆ ಕಾಪಾಡಲು ಈ ನದಿ ದಡದಲ್ಲಿ ಬದುಕುತ್ತಿರುವ, ನದಿ ನೀರನ್ನು ಬಳಸುತ್ತಿರುವ ಮಂದಿಯನ್ನು ಪ್ರೇರೇಪಿಸಿ ಅವರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅಭಿಯಾನದ ಆಶಯ. ಅ. 2ರಿಂದ ಪ್ರಾರಂಭವಾದ ಈ ಅಭಿಯಾನ ಏ. 13ರ ಸೌರ ಯುಗಾದಿಯಂದು ಸಮಾಪನಗೊಳ್ಳಲಿದೆ. ಅಭಿಯಾನದ ಪ್ರಮುಖ ಆಯಾಮಗಳಾದ ಸ್ವಚ್ಛತೆ, ನದಿ ತಟ ಪ್ರದೇಶವನ್ನು ಹಸಿರುಗೊಳಿಸುವುದು, ವೃಕ್ಷಾರೋಪಣ, ಶಾಲಾ ಮಕ್ಕಳಿಗೆ ನದಿಯ ಬಗ್ಗೆ ರಸಪ್ರಶ್ನೆ, ಇಕೊ ಬ್ರಿಕ್ ತಯಾರಿ ತರಬೇತಿ, ಉಡುಪಿ ನಗರದಲ್ಲಿ ವಾರ್ಡ್ ಸ್ತರದಲ್ಲಿ ಹಸಿರುಗೊಳಿಸುವಿಕೆ, ಜಲ ಸಂರಕ್ಷಣೆ, ಸ್ವಚ್ಛತಾ ಕಾರ್ಯಕ್ರಮ, ಸಾಮಾಜಿಕ ಜಾಲತಾಣಗಳಲ್ಲಿ ಸ್ವರ್ಣಾ ನದಿಯ ಮಹತ್ವ ಸಾರುವ ಪೋಸ್ಟರ್, ವೀಡಿಯೊ ಮೂಲಕ ಜನಜಾಗೃತಿ ಕಾರ್ಯಕ್ರಮದ ಆಶಯ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!