Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಅನಾವರಣಗೊಳ್ಳಲಿದೆ ಐವತ್ತು ದೇಶಗಳ ಜಾನಪದ ಮುಖವಾಡ!

ಅದಿತಿ ಆರ್ಟ್ ಗ್ಯಾಲರಿಯಲ್ಲಿ ಅನಾವರಣಗೊಳ್ಳಲಿದೆ ಐವತ್ತು ದೇಶಗಳ ಜಾನಪದ ಮುಖವಾಡ!

ಸುದ್ದಿಕಿರಣ ವರದಿ
ಸೋಮವಾರ, ಜೂನ್ 13

ಅದಿತಿ ಆರ್ಟ್ ಗ್ಯಾಲರಿಯಲ್ಲಿ ಅನಾವರಣಗೊಳ್ಳಲಿದೆ ಐವತ್ತು ದೇಶಗಳ ಜಾನಪದ ಮುಖವಾಡ!
ಉಡುಪಿ: ವಿಶ್ವದ ಸುಮಾರು ಐವತ್ತು ದೇಶಗಳ 150ಕ್ಕೂ ಅಧಿಕ ಜಾನಪದ ಮುಖವಾಡಗಳ ಪ್ರದರ್ಶನ ಕುಂಜಿಬೆಟ್ಟಿನಲ್ಲಿರುವ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜೂ. 17ರಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಮುಖವಾಡ ಸಂಗ್ರಾಹಕ ಹಾಗೂ ಅದಿತಿ ಗ್ಯಾಲರಿ ಆಡಳಿತ ವಿಶ್ವಸ್ಥ ಡಾ. ಕಿರಣ್ ಆಚಾರ್ಯ ತಿಳಿಸಿದರು.

ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಮುಖವಾಡಗಳು ಕೇವಲ ಚಹರೆಗಳನ್ನು ಮರೆಮಾಚಲು ಹಾಗೂ ಅಲಂಕಾರಕ್ಕೆ ಮಾತ್ರಲ್ಲದೆ ಆರೋಗ್ಯ ವೃದ್ಧಿಸಲು, ಶತ್ರು ಬಾಧೆ ನಿವಾರಿಸಲು ಬಳಸಲಾಗುತ್ತಿತ್ತು. ಅನೇಕ ಯುದ್ಧಗಳಲ್ಲಿ ಶತ್ರು ದಾಳಿಯನ್ನು ತಡೆಯಲು ಉಪಯೋಗಿಸಲಾಗುತ್ತಿತ್ತು. ಅಂಥ ಕೆಲವು ಮುಖವಾಡಗಳನ್ನು ಉಡುಪಿ ಭಾಗದ ಕಲಾಸಕ್ತರಿಗೂ ಪರಿಚಯಿಸುವ ಆಶಯದಿಂದ ಈ ವಿಶೇಷ ಪ್ರದರ್ಶನ ಆಯೋಜಿಸಲಾಗುತ್ತಿದೆ ಎಂದರು.

ದಕ್ಷಿಣ ಅಮೆರಿಕಾ, ಇಟೆಲಿ, ಶ್ರೀಲಂಕಾ, ಬರ್ಮಾ, ನೇಪಾಳ, ಆಫ್ರಿಕಾ ಮುಂತಾದ ದೇಶಗಳ ಸುಮಾರು ನೂರೈವತ್ತಕ್ಕೂ ಅಧಿಕ ಮುಖವಾಡಗಳನ್ನು ಕಲಾಪೂರ್ಣವಾಗಿ ಜೋಡಿಸಿಡಲಾಗಿದೆ. ಅಧ್ಯಯನಾಸಕ್ತರಿಗಾಗಿ ಮುಖವಾಡದ ಸಂಕ್ಷಿಪ್ತ ವಿವರಣೆಯನ್ನೂ ಒದಗಿಸಲಾಗಿದೆ ಎಂದೂ ಡಾ. ಆಚಾರ್ಯ ವಿವರಿಸಿದರು.

ಜೂ. 16ರಂದು ಸಂಜೆ 5.15ಕ್ಕೆ ಜಿಲ್ಲಾಧಿಕಾರಿ ಕೂರ್ಮರಾವ್ ಪ್ರದರ್ಶನ ಉದ್ಘಾಟಿಸಲಿದ್ದು, ಯೂನಿಯನ್ ಬ್ಯಾಂಕ್ ಡಿಜಿಎಮ್ ಡಾ| ಎಚ್.ಟಿ.ಎಂ ವಾಸಪ್ಪ, ಮುಂಬೈ ಕಲೋಪಾಸಕ ಅರವಿಂದ ವ್ಯಾಸರಾಯ ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಜೂ. 17ರಿಂದ 19ರ ವರೆಗೆ ಬೆಳಿಗ್ಗೆ 10ರಿಂದ ರಾತ್ರಿ 8ರ ವರೆಗೆ ಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಡಾ. ಕಿರಣ್ ಆಚಾರ್ಯ ತಿಳಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!