Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಜುಲೈ 12: `ಚಾರ್ ಧಾಮ್ ಯಾತ್ರಾ' ಪುಸ್ತಕ ಅನಾವರಣ

ಜುಲೈ 12: `ಚಾರ್ ಧಾಮ್ ಯಾತ್ರಾ’ ಪುಸ್ತಕ ಅನಾವರಣ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 11

ಜುಲೈ 12: ಚಾರ್ ಧಾಮ್ ಯಾತ್ರಾ ಪುಸ್ತಕ ಅನಾವರಣ
ಉಡುಪಿ: ಪ್ರವಾಸ ಸಂಘಟಕ ಮರವಂತೆ ನಾಗರಾಜ್ ಹೆಬ್ಬಾರ್ ವಿರಚಿತ ಪ್ರವಾಸ ಕಥನ ಚಾರ್ ಧಾಮ್ ಯಾತ್ರಾ ಪುಸ್ತಕ ಜುಲೈ 12ರಂದು ಅನಾವರಣಗೊಳ್ಳಲಿದೆ.

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಸಂಯುಕ್ತಾಶ್ರಯದಲ್ಲಿ ಅಂದು ಸಂಜೆ 6 ಗಂಟೆಗೆ ಇಲ್ಲಿನ ಮಣಿಪಾಲ್ ಇನ್ ಹೋಟೆಲ್ ನ ಸಿಂಡ್ರೆಲಾ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಣಿಪಾಲ ಕೆಎಂಸಿ ಪ್ರಾಧ್ಯಾಪಕ, ಖ್ಯಾತ ಮೂಳೆತಜ್ಞ ಡಾ. ಪ್ರೊ. ಕಿರಣ್ ಆಚಾರ್ಯ ಪುಸ್ತಕ ಅನಾವರಣಗೊಳಿಸುವರು.

ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಲಕ್ಷ್ಮೀನಾರಾಯಣ ಕೃತಿ ಪರಿಚಯ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕರಾವಳಿ ಪ್ರವಾಸೋದ್ಯಮ ಸಂಘಟನೆ ಅಧ್ಯಕ್ಷ ಮನೋಹರ್ ಎಸ್. ಶೆಟ್ಟಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊಫೆಸರ್ ಶಂಕರ್ ಉಪಸ್ಥಿತರಿರುವರು ಎಂದು ಉಡುಪಿ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ರವಿರಾಜ್ ಎಚ್. ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!