Wednesday, July 6, 2022
Home ಮನರಂಜನೆ ಪ್ರವಾಸ ಮಲ್ಪೆ ಬೀಚ್ ನಲ್ಲಿ ತೇಲುವ ಸೇತುವೆ

ಮಲ್ಪೆ ಬೀಚ್ ನಲ್ಲಿ ತೇಲುವ ಸೇತುವೆ

ಸುದ್ದಿಕಿರಣ ವರದಿ
ಗುರುವಾರ, ಮೇ 5

ಮಲ್ಪೆ ಬೀಚ್ ನಲ್ಲಿ ತೇಲುವ ಸೇತುವೆ
ಉಡುಪಿ: ಮಲ್ಪೆ ಸಮುದ್ರ ತೀರದಲ್ಲಿ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಕಾರ್ಯಪ್ರವೃತ್ತವಾಗಿದ್ದು ಮಲ್ಪೆ ಬೀಚ್‌ ನಲ್ಲಿ ಹೊಸದಾದ ತೇಲುವ ಸೇತುವೆ ನಿರ್ಮಿಸಲಾಗಿದೆ.

ಈ ತೇಲುವ ಸೇತುವೆಯು ಒಂದು ರೀತಿಯಲ್ಲಿ ಸಾಹಸ ಕ್ರೀಡೆಯಾಗಿದ್ದು, ಗಟ್ಟಿ ಗುಂಡಿಗೆ ಇರುವ ಯಾರು ಬೇಕಾದರೂ ಆನಂದಿಸಬಹುದು.

ಈ ಸೇತುವೆಯ ಮೇಲೆ ನಡೆದು ಹೋಗಬಹುದು. ಅದರ ಅಡಿಯಲ್ಲಿ ಬರುವ ಅಲೆಗಳು ಸಣ್ಣದಿರಲಿ, ದೊಡ್ಡದಿರಲಿ, ಈ ಸೇತುವೆಯನ್ನು ಮೇಲಕ್ಕೆತ್ತಿ ಕೆಳಗಿಳಿಸುತ್ತದೆ. ಅಲೆಯ ರಬಸಕ್ಕೆ ಅಲೆಯಂತಯೇ ಮೇಲೇರಿ ಅದೇ ರಭಸದಲ್ಲಿ ಕೆಳಗಿಳಿದು ಬರುವ ಅನುಭವ ಅವರ್ಣನೀಯ. ಇದು ಪ್ರವಾಸಿಗರಿಗೆ ಅತ್ಯಂತ ಉಲ್ಲಾಸದ ಅನುಭವ ನೀಡುವ ಹಿನ್ನೆಲೆಯಲ್ಲಿ ಇದನ್ನು ನಿರ್ಮಿಲಾಗಿದೆ.

ಸೇತುವೆ 100 ಮೀ. ಉದ್ದ ಮತ್ತು 3.5 ಮೀ. ಅಗಲ ಹೊಂದಿದೆ. ಸೇತುವೆಯ ಇಕ್ಕೆಲಗಳಲ್ಲಿ ರೇಲಿಂಗ್‌ ಸಿಸ್ಟಮ್‌ ಅಳವಡಿಸಿದ್ದು ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಬೀಚ್‌ ನಿರ್ವಹಣಾ ತಂಡದ ಸುದೇಶ್‌ ಶೆಟ್ಟಿ ನೇತೃತ್ವದಲ್ಲಿ ನಿರ್ಮಿಸಲಾಗಿದೆ.

ಅದರಲ್ಲಿ 10 ಮಂದಿ ಲೈಫ್‌ ಗಾರ್ಡ್‌, 30 ಲೈಫ್‌ ಬ್ಯಾಗ್ಸ್ ಹೊಂದಿದ್ದು, ಪ್ರವಾಸಿಗರು ಕಡ್ಡಾಯವಾಗಿ ಲೈಫ್‌ ಜಾಕೆಟ್‌ ಧರಿಸಿಕೊಂಡು ಸೇತುವೆಯ ಮೇಲೆ ನಡೆಯಬಹುದು.

ಅದನ್ನು ಹೈ ಡೆನ್ಸಿಟಿ ಪಾಲಿಥಿನ್ (HDPI) ಬ್ಲಾಕ್‍‍ಗಳಿಂದ ಮಾಡಲ್ಪಟ್ಟಿದ್ದು, ಅಲೆಯ ಏರಿಳಿತದಿಂದ ಭಯಭೀತರಾದವರು ರೈಲಿಂಗುಗಳ ಆಸರೆ ಪಡೆಯಬಹುದು.

ಕೇರಳದ ಬೇಫೂರ್‌ ಬೀಚ್‌ ಹೊರತುಪಡಿಸಿದರೆ ಇಂಥ ಸೌಲಭ್ಯ ಹೊಂದುವ ಕರ್ನಾಟಕದ ಮೊದಲ ಬೀಚ್, ಮಲ್ಪೆ ಎಂದು ಬೀಚ್‌ ನಿರ್ವಹಣಾ ತಂಡದ ಸುದೇಶ್‌ ಶೆಟ್ಟಿ ಹೇಳಿದ್ದಾರೆ.

ಶುಕ್ರವಾರ ಸಂಜರ ಲೋಕಾರ್ಪಣೆಗೊಳ್ಳಲಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!