Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ಉಚಿತ ಚಿತ್ರಕಲಾ ಕಾರ್ಯಾಗಾರ

ಉಚಿತ ಚಿತ್ರಕಲಾ ಕಾರ್ಯಾಗಾರ

ಉಚಿತ ಚಿತ್ರಕಲಾ ಕಾರ್ಯಾಗಾರ

ಮಣಿಪಾಲ ನ. 24 (ಸುದ್ದಿಕಿರಣ ವರದಿ): ಸೃಜನಶೀಲತೆ, ಏಕಾಗ್ರತೆ ಮತ್ತು ಮನೋಚೈತನ್ಯ ಬಲಪಡಿಸುವ ನಿಟ್ಟಿನಲ್ಲಿ 18ರಿಂದ 75ರ ವಯೋಮಾನದ ವರೆಗಿನ ಕಲಾಸಕ್ತರಿಗೆ ಪೃಶಾ ಸೇವಾ ಟ್ರಸ್ಟ್, ಉಡುಪಿ ಮಣಿಪಾಲ ಮತ್ತು ತ್ರಿವರ್ಣ ಕಲಾ ಕೇಂದ್ರ ಮಣಿಪಾಲ ವತಿಯಿಂದ ಒಂದು ದಿನದ ಚಿತ್ರಕಲಾ ಕಾರ್ಯಾಗಾರ ಡಿ. 5ರಂದು ಇಲ್ಲಿನ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ನಡೆಯುವ ಶಿಬಿರದಲ್ಲಿ ರೇಖೆ ಆಕಾರ, ರೂಪ-ಬಣ್ಣಗಳ ಬಳಕೆಯೊಂದಿಗೆ ಚಿತ್ರಕಲೆಯ ಪ್ರಾಥಮಿಕ ಜ್ಞಾನ ಮತ್ತು ವಿವಿಧ ಆಯಾಮಗಳ ಪರಿಕಲ್ಪನೆಯೊಂದಿಗೆ ಚಿತ್ರಕೃತಿಯ ಪೆನ್ಸಿಲ್ ಶೇಡಿಂಗ್ ರಚನೆ ಕುರಿತು ಉಚಿತ ತರಬೇತಿ ನೀಡಲಾಗುವುದು.

ಬೇಸಿಕ್ ಮತ್ತು ಶೇಡಿಂಗ್ ಪ್ರತ್ಯೇಕ ವಿಭಾಗ ನಡೆಸುತ್ತಿದ್ದು, ಭಾಗವಹಿಸಿದ ಶಿಬಿರಾರ್ಥಿಗಳಿಗೆ ಕಲಾಪರಿಕರ, ಪ್ರಮಾಣಪತ್ರವನ್ನು ನೀಡಲಾಗುತ್ತದೆ. 30 ಮಂದಿಗೆ ಸೀಮಿತ ಅವಕಾಶವನ್ನು ಕಲ್ಪಿಸಿದ್ದು, ಆಸಕ್ತರು ನ. 30ರೊಳಗೆ 9741701211 ಅಥವಾ 9945671113ಗೆ ಕರೆ ಮಾಡಿ ನೋಂದಾಯಿಸಬೇಕು ಎಂದು ಪೃಶಾ ಸೇವಾ ಟ್ರಸ್ಟ್ ನ ನಾಗರಾಜ ಮತ್ತು ತ್ರಿವರ್ಣ ಕಲಾ ಕೇಂದ್ರದ ಹರೀಶ ಸಾಗ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!