Thursday, December 2, 2021
Home ಸಮಾಚಾರ ಜಿಲ್ಲಾ ಸುದ್ದಿ ಕೃಷ್ಣಪ್ರೇಮ ಪ್ರಶಸ್ತಿಗೆ ಆಯ್ಕೆ

ಕೃಷ್ಣಪ್ರೇಮ ಪ್ರಶಸ್ತಿಗೆ ಆಯ್ಕೆ

ಕೃಷ್ಣಪ್ರೇಮ ಪ್ರಶಸ್ತಿಗೆ ಆಯ್ಕೆ

ಉಡುಪಿ, ನ. 16 (ಸುದ್ದಿಕಿರಣ ವರದಿ): ನೃತ್ಯನಿಕೇತನ ಕೊಡವೂರು ಸಂಸ್ಥೆ ಆಶ್ರಯದಲ್ಲಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಕೀರ್ತಿಶೇಷ ಕೆ. ಕೃಷ್ಣಮೂರ್ತಿ ರಾಯರ ಹೆಸರಿನಲ್ಲಿ ನೀಡುತ್ತಿರುವ ಮೂರನೇ ವರ್ಷದ ಕೃಷ್ಣ ಪ್ರೇಮ ಪ್ರಶಸ್ತಿಯನ್ನು ಕಲೆಯ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ನಾಲ್ವರು ಹಿರಿಯ ಸಾಧಕರಿಗೆ ನೀಡಲಾಗುತ್ತಿದೆ.

ಸಂಗೀತ ಕ್ಷೇತ್ರದಲ್ಲಿ ಕಳೆದ 50 ವರ್ಷದಿಂದ ತೊಡಗಿಸಿಕೊಂಡಿರುವ ಸಂಗೀತ ಕಲಾವಿದ ಉಡುಪಿಯ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಫೈನ್ ಆರ್ಟ್ಸ್ ಸಂಗೀತ ಪ್ರಾಧ್ಯಾಪಕ ಸಂಗೀತ ಕಲಾತಪಸ್ವಿ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ, ಕಲಾವಿಮರ್ಶಕ ಪ್ರೊ| ಕೆ. ರಾಮಮೂರ್ತಿ ರಾವ್ ಮೈಸೂರು, ಉಡುಪಿಯ ರಂಗ ಸಂಗೀತ ನಿರ್ದೇಶಕ ಕೆ. ರಾಘವೇಂದ್ರ ಭಟ್ ಮತ್ತು ಉಡುಪಿಯ ವಸ್ತ್ರಾಲಂಕಾರ ಮತ್ತು ವರ್ಣಾಲಂಕಾರ ಕಲಾವಿದ ಯು. ಸೋಮನಾಥ್ ಅವರಿಗೆ ಪ್ರಶಸ್ತಿ ನೀಡಲಾಗುವುದು.

ನ. 19ರಂದು ಸಂಜೆ 6 ಗಂಟೆಗೆ ಕೊಡವೂರು ವಿಪ್ರಶ್ರೀ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಕನ್ನಡ ಗಣಕ ಕೀಲಿಮಣೆ ಕರ್ತೃ ಪ್ರೊ. ಕೆ. ಪಿ. ರಾವ್ ಪ್ರಶಸ್ತಿ ಪ್ರದಾನ ಮಾಡುವರು.

ಕಲಾಪ್ರೋತ್ಸಾಹಕ ವಿಶ್ವನಾಥ ಶೆಣೈ ಮತ್ತು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ಸಾಧು ಸಾಲಿಯಾನ್ ಕೊಡವೂರು ಅಭ್ಯಾಗತರಾಗಿ ಆಗಮಿಸುವರು.

ಬಳಿಕ ವಿದುಷಿ ಅನಘಶ್ರೀ ಅವರಿಂದ ನೃತ್ಯಗಾಥಾ ಏಕವ್ಯಕ್ತಿ ರಂಗಪ್ರಯೋಗ ನಡೆಯಲಿದೆ ಎಂದು ವಿದ್ವಾನ್ ಸುಧೀರ್ ರಾವ್ ಕೊಡವೂರು ಪ್ರಕಟಣೆ ತಿಳಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!