Wednesday, July 6, 2022
Home ಮನರಂಜನೆ ಪಣಿಯಾಡಿ ಪ್ರಶಸ್ತಿಗೆ ಅಕ್ಷಯ ಶೆಟ್ಟಿ ವಿರಚಿತ `ದೆಂಗ' ಕಾದಂಬರಿ ಆಯ್ಕೆ

ಪಣಿಯಾಡಿ ಪ್ರಶಸ್ತಿಗೆ ಅಕ್ಷಯ ಶೆಟ್ಟಿ ವಿರಚಿತ `ದೆಂಗ’ ಕಾದಂಬರಿ ಆಯ್ಕೆ

ಸುದ್ದಿಕಿರಣ ವರದಿ
ಗುರುವಾರ, ಜನವರಿ 6, 2022

ಪಣಿಯಾಡಿ ಪ್ರಶಸ್ತಿಗೆ ಅಕ್ಷಯ ಶೆಟ್ಟಿ ವಿರಚಿತ `ದೆಂಗ’ ಕಾದಂಬರಿ ಆಯ್ಕೆ
ಉಡುಪಿ: ತುಳುಕೂಟ ಉಡುಪಿ ನೀಡುವ 2020- 2021ನೇ ಸಾಲಿನ ಎಸ್. ಯು. ಪಣಿಯಾಡಿ ಸ್ಮಾರಕ ತುಳು ಕಾದಂಬರಿ ಪ್ರಶಸ್ತಿಗೆ ಮಂಗಳೂರು ಸಹ್ಯಾದ್ರಿ ಇಂಜಿನಿಯರ್ ಹಾಗೂ ಮ್ಯಾನೇಜ್ ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಅಕ್ಷಯ ಆರ್. ಶೆಟ್ಟಿ ಅವರ ದೆಂಗ ಕಾದಂಬರಿ ಆಯ್ಕೆಯಾಗಿದೆ.

ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ತುಳು ಭಾಷೆಯ ಶ್ರೇಷ್ಠ ಸಾಹಿತಿ ದಿ| ಎಸ್. ಯು. ಪಣಿಯಾಡಿ ನೆನಪಿಗಾಗಿ ಉಡುಪಿ ತುಳುಕೂಟ ಕಳೆದ 27 ವರ್ಷದಿಂದ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ, ಕೃತಿ ಬಿಡುಗಡೆ ಸಮಾರಂಭ ಆಯೋಜಿಸುತ್ತಿದೆ. ಆ ಮೂಲಕ ತುಳು ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಯುವ ಕಾದಂಬರಿಕಾರರನ್ನು ಪರಿಚಯಿಸಿ, ಪ್ರಶಸ್ತಿ ಪುರಸ್ಕೃತರ 33 ತುಳು ಕಾದಂಬರಿಗಳನ್ನು ಪ್ರಕಟಿಸುವ ಮೂಲಕ ತುಳು ಭಾಷಾ ಕೃತಿಗಳ ಬೆಳೆವಣಿಗೆಗೆ ವಿಶೇಷ ಕೊಡುಗೆ ನೀಡಿದೆ.

ಈ ಬಾರಿ ಕಾದಂಬರಿ ಸ್ಪರ್ಧೆಗೆ ಒಟ್ಟು 7 ಹಸ್ತಪ್ರತಿಗಳು ಬಂದಿದ್ದು, ಸ್ಪರ್ಧೆಯ ತೀರ್ಪುಗಾರರಾಗಿ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ, ಜಾನಕಿ ಬ್ರಹ್ಮಾವರ, ಸಕು ಪಾಂಗಾಳ, ಉಪನ್ಯಾಸಕಿ ಡಾ|ನಿಕೇತನ ಸಹಕರಿಸಿದ್ದರು ಎಂದು ತುಳುಕೂಟ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಕಾದಂಬರಿ ಪ್ರಶಸ್ತಿ ಸಂಚಾಲಕಿ ತಾರಾ ಉಮೇಶ್ ಆಚಾರ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!