Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಜೂ. 18: ಜಾನಪದ ಉತ್ಸವ, ಪ್ರಶಸ್ತಿ ಪ್ರದಾನ

ಜೂ. 18: ಜಾನಪದ ಉತ್ಸವ, ಪ್ರಶಸ್ತಿ ಪ್ರದಾನ

ಸುದ್ದಿಕಿರಣ ವರದಿ
ಗುರುವಾರ, ಜೂನ್ 16

ಜೂ. 18: ಜಾನಪದ ಉತ್ಸವ, ಪ್ರಶಸ್ತಿ ಪ್ರದಾನ
ಉಡುಪಿ: ಕರ್ನಾಟಕ ಜಾನಪದ ಪರಿಷತ್ತು, ತಲ್ಲೂರು ಫ್ಯಾಮಿಲಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜೂನ್ 18ರಂದು ಅಪರಾಹ್ನ 3.30ಕ್ಕೆ ಅಜ್ಜರಕಾಡು ಪುರಭವನದಲ್ಲಿ ಜಾನಪದ ಉತ್ಸವ, ಜಾನಪದ ಪ್ರಶಸ್ತಿ ಪ್ರದಾನ, ವಿಜಯ ಗೋಪಾಲ ಬಂಗೇರ ಅವರ ನೆನಪಿನಂಗಳದಿಂದ ಪುಸ್ತಕ ಅನಾವರಣ ಹಾಗೂ ಉಡುಪಿ ಮತ್ತು ಬ್ರಹ್ಮಾವರ ತಾಲ್ಲೂಕು ಘಟಕಗಳ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ. ತಿಮ್ಮೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಟಿ. ಅಂಗಾರ, ಶಾಸಕ ಕೆ. ರಘುಪತಿ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ನಗರಸಭಾ ಸದಸ್ಯ ರಮೇಶ್ ಕಾಂಚನ್, ತಿಂಗಳೆ ಪ್ರತಿಷ್ಠಾನ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಡಾ. ಎಂ. ಕೆ. ಭಟ್ ಅಭ್ಯಾಗತರಾಗಿದ್ದಾರೆ.

ಪ್ರಾಧ್ಯಾಪಕ ಡಾ| ಅರುಣ್ ಕುಮಾರ್ ಎಸ್. ಆರ್. ವಿಶೇಷ ಉಪನ್ಯಾಸ ನೀಡಲಿದ್ದಾರೆ. ರಂಗಕರ್ಮಿ ಹಾಗೂ ನಟ ಪ್ರದೀಪ್ ಚಂದ್ರ ಕುತ್ಪಾಡಿ ಅವರಿಗೆ ಜಾನಪದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಜಾನಪದ ಕಲಾಪ್ರಕಾರಗಳ ಪ್ರದರ್ಶನ ನಡೆಯಲಿದ್ದು ಮಧ್ಯಾಹ್ನ 2.30ರಿಂದ ಜೋಡುಕಟ್ಟೆಯಿಂದ ಕಲಾತಂಡಗಳ ಪ್ರದರ್ಶನ ಮೆರವಣಿಗೆ ನಡೆಯಲಿದೆ.

ಹಿರಿಯ ನಾಗರಿಕರ ವೇದಿಕೆ, ಕರವೇ, ನವ ಚೈತನ್ಯ ಯುವಕ ಮಂಡಳಿ, ನಿಡಂಬೂರು ಯುವಕ ಮಂಡಲ, ಬಿಲ್ಲವರ ಸೇವಾ ಸಂಘ, ಯುನೈಟೆಡ್ ಅಥ್ಲಿಟ್ ಹಾಗೂ ಇತರ ಸಂಘಸಂಸ್ಥೆಗಳು ಸಹಕಾರ ನೀಡಲಿದ್ದಾರೆ ಎಂದು ಡಾ| ತಲ್ಲೂರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಾನಪದ ಪರಿಷತ್ತು ಜಿಲ್ಲಾ ಘಟಕದ ಕಾರ್ಯದರ್ಶಿ ರವಿರಾಜ ನಾಯಕ್, ಗೌರವ ಅಧ್ಯಕ್ಷ ಶ್ರೀಧರ ಶೇಣವ, ಕಾರ್ಕಳ ಕಸಾಪ ಅಧ್ಯಕ್ಷ ಎನ್. ಎಂ. ಹೆಗಡೆ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!