ಸುದ್ದಿಕಿರಣ ವರದಿ
ಮಂಗಳವಾರ, ಜನವರಿ 25
ರಾಜಪಥದಲ್ಲಿ ರಾರಾಜಿಸಲಿರುವ ಕಂಗೀಲು ನೃತ್ಯ
ಉಡುಪಿ: ದೇಶದ ರಾಜಧಾನಿಯ ರಾಜಪಥದಲ್ಲಿ ರಾರಾಜಿಸಲಿದೆ ಕರಾವಳಿಯ ಕಂಗೀಲು ನೃತ್ಶ.
ಜನವರಿ 26 ರಂದು ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಶೋತ್ಸವದ ಸಾಂಸ್ಕೃತಿಕ ಕಾರ್ಯಮದಲ್ಲಿ ಕರಾವಳಿಯ ಕಂಗೀಲು ನೃತ್ಶ ಪ್ರದರ್ಶನಗೊಳ್ಳಲಿದೆ.
ಇಲ್ಲಿನ ಎಂಜಿಎಂ ಕಾಲೇಜು ಹಾಗೂ ಪೂರ್ಣಪ್ರಜ್ಞ ಕಾಲೇಜಿನ 9 ಮಂದಿ ವಿದ್ಶಾರ್ಥಿನಿಯರು ಮತ್ತು 5 ಮಂದಿ ವಿದ್ಶಾರ್ಥಿಗಳನ್ನೊಳಗೊಂಡ ತಂಡ ಗಣರಾಜ್ಶೋತ್ಸವದ ಪಥ ಸಂಚಲನ ಸಂದರ್ಭದಲ್ಲಿ ನಡೆಯುವ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಕಂಗೀಲು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಈ ವಿದ್ಶಾರ್ಥಿಗಳು ಉಡುಪಿ ಫೀಟ್ಸ್ ಲಾಂಛನದಡಿ ಭಾಗವಹಿಸುತ್ತಿದ್ದು, ತುಳುನಾಡಿನ ಜನಪದ ನೃತ್ಶ ಪ್ರಕಾರವನ್ನು ರಾಜಪಥದಲ್ಲಿ ಪ್ರದರ್ಶಿಸುವ ಅವಕಾಶ ಪಡೆದಿದ್ದಾರೆ.
ಆಯ್ಕೆಯ ವಲಯ ಮಟ್ಟದ ಮೊದಲ ಪ್ರಕ್ರಿಯೆ ಡಿಸೆಂಬರ್ 11ರಂದು ಬೆಂಗಳೂರಿನಲ್ಲಿ ನಡೆದಿದ್ದು, ಕಿರಣ್ ಪಡುಬಿದ್ರಿ ತರಬೇತಿಯೊಂದಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿ, ದೆಹಲಿಯಲ್ಲಿ ನಡೆಯಲಿರುವ ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಗೊಂಡಿದ್ದರು.
ಡಿಸೆಂಬರ್ 18ರಂದು ದೆಹಲಿಯಲ್ಲಿ ನಡೆದ ಎರಡನೆಯ ಹಂತದ ಗ್ರ್ಶಾಂಡ್ ಪೈನಲ್ ಮಟ್ಟದ ಆಯ್ಕೆಯಲ್ಲಿ 104 ತಂಡಗಳು ಭಾಗವಹಿಸಿದ್ದು, ಅದರಲ್ಲಿ ಉಡುಪಿ ಬೀಟ್ಸ್ ತಂಡ ಮೊದಲ 4ನೆಯ ತಂಡವಾಗಿ ಆಯ್ಕೆಯಾಗಿತ್ತು.
ಗುರುಚರಣ್ ಪೊಲಿಪು ಮಾರ್ಗದರ್ಶನದೊಂದಿಗೆ ಈ ತಂಡವು ಸ್ಪರ್ಧಿಸಿತ್ತು.
ಅಂತಿಮ ಆಯ್ಕೆ ಬಳಿಕ ತಂಡದ ಎಲ್ಲ ಸದಸ್ಶರೂ ಜ. 7ರಂದು ದೆಹಲಿಗೆ ತೆರಳಿದ್ದು, ಇದೀಗ ಅಂತಿಮ ಪ್ರದರ್ಶನದ ತಾಲೀಮಿನಲ್ಲಿ ಪ್ರತಿನಿತ್ಶ ಭಾಗವಹಿಸುತ್ತಿದ್ದಾರೆ.