Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಮಾಧವಿ ನಾಟಕ ಪ್ರದರ್ಶನ

ಮಾಧವಿ ನಾಟಕ ಪ್ರದರ್ಶನ

ಸುದ್ದಿಕಿರಣ ವರದಿ
ಮಂಗಳವಾರ, ಫೆಬ್ರವರಿ 8

ಮಾಧವಿ ನಾಟಕ ಪ್ರದರ್ಶನ
ಉಡುಪಿ: ನೃತ್ಯನಿಕೇತನ ಕೊಡವೂರು, ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಮತ್ತು ರಜತೋತ್ಸವ ಸಮಿತಿ ಬ್ರಾಹ್ಮಣ ಮಹಾಸಭಾ ಕೊಡವೂರು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಾ| ಶ್ರೀಪಾದ ಭಟ್ ನಿರ್ದೇಶನದ ಸುಧಾ ಆಡುಕಳ ರಚನೆಯ ಕೈವಲ್ಯ ಕಲಾ ಕೇಂದ್ರದ ಕಲಾವಿದರಾದ ದಿವ್ಯಶ್ರೀ ಕೆ. ಮತ್ತು ಶರತ್ ಬೋಪಣ್ಣ ಅಭಿನಯದ ನಾಟಕ ಮಾಧವಿ ಈಚೆಗೆ ಕೊಡವೂರು ವಿಪ್ರಶ್ರೀ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು.

ಖ್ಯಾತ ಸಾಹಿತ್ಯ ವಿಮರ್ಶಕ ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಪ್ರವರ್ತಕ ಪ್ರೊ. ಮುರಳೀಧರ ಉಪಾಧ್ಯಾಯ ಹಿರಿಯಡ್ಕ ಕಾರ್ಯಕ್ರಮ ಉದ್ಘಾಟಿಸಿದರು.

ನಾರಾಯಣ ಬಲ್ಲಾಳ್, ಮಂಜುನಾಥ ಭಟ್, ಚಂದ್ರಶೇಖರ ರಾವ್, ಸಾಧು ಸಾಲಿಯಾನ್, ಸುಧಾ ಆಡುಕಳ, ನಟರಾದ ದಿವ್ಯಶ್ರೀ ಮತ್ತು ಶರತ್ ಬೋಪಣ್ಣ, ಗಣೇಶ್, ಸುಧೀರ್ ರಾವ್ ಕೊಡವೂರು, ಮಾನಸಿ ಸುಧೀರ್ ಉಪಸ್ಥಿತರಿದ್ದರು

ವಿದ್ವಾನ್ ಸುಧೀರ್ ರಾವ್ ಕೊಡವೂರು ನಿರೂಪಿಸಿ ಸ್ವಾಗತಿಸಿ, ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!