Friday, January 28, 2022
Home ಮನರಂಜನೆ ಶೇಕ್ಸ್ ಪಿಯರ್ ನಾಟಕ ವಿಮರ್ಶೆ

ಶೇಕ್ಸ್ ಪಿಯರ್ ನಾಟಕ ವಿಮರ್ಶೆ

ಶೇಕ್ಸ್ ಪಿಯರ್ ನಾಟಕ ವಿಮರ್ಶೆ

ಮಣಿಪಾಲ, ನ. 29 (ಸುದ್ದಿಕಿರಣ ವರದಿ): ಜೀವನ ಮತ್ತು ವೈವಿಧ್ಯಮಯ ಪಾತ್ರಗಳಲ್ಲಿ ಅಡಕವಾಗಿರುವ ಸೂಕ್ಷ್ಮತೆಯನ್ನು ಸೆರೆಹಿಡಿದಿರುವುದೇ ಶೇಕ್ಸ್ ಪಿಯರ್ ನ ಎಲ್ಲ ಕೃತಿಗಳ ಶ್ರೇಷ್ಠತೆ ಎಂದು ಖ್ಯಾತ ಬರಹಗಾರ ಮತ್ತು ರಂಗ ನಿರ್ದೇಶಕ ಎಸ್. ರಘುನಂದನ ಹೇಳಿದರು.

ಇಲ್ಲಿನ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ ಆ್ಯಂಡ್ ಸೈನ್ಸಸ್ ಆಯೋಜಿಸಿದ್ದ ವೆಬಿನಾರ್ ನಲ್ಲಿ ಷೇಕ್ಸ್ಪಿಯರ್ ನ ‘ರೋಮಿಯೋ ಜೂಲಿಯೆಟ್’ ಮತ್ತು `ಮ್ಯಾಕ್ ಬೆತ್’ ಕುರಿತು ಮಾತನಾಡುತಿದ್ದರು.

ಶೇಕ್ಸ್ ಪಿಯರ್ ಒರಟು ಕೋಮಲ ಕ್ರೂರ ಸೌಮ್ಯ ಲೋಲುಪತೆ ಸಂತತ್ವ, ದೀನ ಭವ್ಯದಂಥ ನೂರಾರು ವ್ಯತಿರಿಕ್ತ ಪಾತ್ರಗಳನ್ನು ರಚಿಸಿ, ಅವುಗಳನ್ನು ಒಟ್ಟಿಗೆ ಬೆಸೆದು ಜೀವನದ ‘ವಾಸ್ತವ’ವನ್ನು ಸೆರೆಹಿಡಿಡಿದ್ದಾನೆ. ರೋಮಿಯೋ ಮತ್ತು ಜೂಲಿಯೆಟ್’ ಮತ್ತು ‘ಮ್ಯಾಕ್ ಬೆತ್’ನ ನಾಟಕಗಳ ನಡುವೆ ಅಂಥ ವ್ಯತಿರಿಕ್ತತೆಯನ್ನು ನಾವು ನೋಡಬಹುದು ಎಂದರು.

ರೋಮಿಯೋ ಮತ್ತು ಜೂಲಿಯೆಟ್ ಅವರನ್ನು ಪುರಾತನ ಪ್ರೇಮಿಗಳು ಮತ್ತು ಅಮರ ಪಾತ್ರಗಳು ಎಂದು ಬಣ್ಣಿಸಿದ ರಘುನಂದನ, ಆ ಮೂಲ ಪಾತ್ರಗಳು ದೇಶ ಮತ್ತು ಭಾಷೆಗಳ ಗಡಿ ಮೀರಿ ನೂರಾರು ನಾಟಕಗಳು ಮತ್ತು ಚಲನಚಿತ್ರಗಳಲ್ಲಿ ರೂಪು ತಳೆದಿವೆ. ಮ್ಯಾಕ್ ಬೆತ್ ನಮ್ಮೊಳಗಿನ ‘ದುಷ್ಟತ್ವದ’ ಜೊತೆಗೆ ವ್ಯವಹರಿಸುತ್ತದೆ ಎಂದರು.

ಅದಕ್ಕೂ ಮುನ್ನ ಮಾತನಾಡಿದ ಜಿಸಿಪಿಎಎಸ್ ನಿರ್ದೇಶಕ ಪ್ರೊ. ವರದೇಶ್ ಹಿರೇಗಂಗೆ, ಎಲ್ಲಾ ಟೀಕೆಗಳ ಹೊರತಾಗಿಯೂ ಶೇಕ್ಸ್ ಪಿಯರ್ ಕಾಲಗಳನ್ನೂ ಮೀರಿ ಸಮಕಾಲೀನ ಬರಹಗಾರನಾಗಿ ಉಳಿದಿದ್ದಾನೆ ಎಂದರು.

ಇದೇ ಸಂದರ್ಭದಲ್ಲಿ ಪ್ರೊ. ಮನು ಚಕ್ರವರ್ತಿ, ಪ್ರೊ. ಫಣಿರಾಜ್, ಭ್ರಮರಿ ಶಿವಪ್ರಕಾಶ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!