Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಮಲಬಾರ್ ವಿಶ್ವ ರಂಗ ಪುರಸ್ಕಾರಕ್ಕೆ ಆಯ್ಕೆ

ಮಲಬಾರ್ ವಿಶ್ವ ರಂಗ ಪುರಸ್ಕಾರಕ್ಕೆ ಆಯ್ಕೆ

ಸುದ್ದಿಕಿರಣ ವರದಿ
ಶನಿವಾರ, ಫೆಬ್ರವರಿ 26

ಮಲಬಾರ್ ವಿಶ್ವ ರಂಗ ಪುರಸ್ಕಾರಕ್ಕೆ ಆಯ್ಕೆ
ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಸಹಯೋಗದೊಂದಿಗೆ ಪ್ರದಾನ ಮಾಡುತ್ತಿರುವ ಮಲಬಾರ್ ವಿಶ್ವರಂಗ ಪುರಸ್ಕಾರಕ್ಕೆ ರಾಜ್ಯ ಮತ್ತು ಹೊರ ರಾಜ್ಯದ ಐವರು ಹಿರಿಯ ರಂಗಕರ್ಮಿಗಳು ಆಯ್ಕೆಯಾಗಿದ್ದಾರೆ.

ಕುಂದಾಪುರದ ಡಾ| ಪಾರ್ವತಿ ಜಿ. ಐತಾಳ (ನಾಟಕಗಾರ್ತಿ ಮತ್ತು ವಿಮರ್ಶಕಿ), ಮುಂಬೈಯ ಡಾ| ಭರತ್ ಕುಮಾರ್ ಪೊಲಿಪು (ನಟ ಹಾಗೂ ನಿರ್ದೇಶಕ), ಉಡುಪಿ ಬಿ. ಪ್ರಭಾಕರ ಭಂಡಾರಿ (ಸಂಘಟಕ, ತುಳು ರಂಗಭೂಮಿ ಕಲಾವಿದ) ಮಂಗಳೂರಿನ ಅರೆಹೊಳೆ ಸದಾಶಿವ ರಾವ್ (ಸಂಘಟಕ, ಕನ್ನಡ ರಂಗಭೂಮಿ ಕಲಾವಿದ), ಹಾವೇರಿಯ ಶಂಕರ ಶಿವಪ್ಪ ತುಮ್ಮಣ್ಣನವರ (ನಟ) ಅವರನ್ನು ಆಯ್ಕೆ ಮಾಡಲಾಗಿದೆ.

ಮಾ. 27ರಂದು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನಡೆಯುವ ವಿಶ್ವ ರಂಗಭೂಮಿ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಸಮಿತಿ ಸಂಚಾಲಕ ರಾಜೇಶ್ ಭಟ್ ಪಣಿಯಾಡಿ ಪ್ರಕಟಣೆ ತಿಳಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!