Wednesday, August 10, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಅಯೋಧ್ಯೆ: 115 ದೇಶಗಳ ನೀರು ಬಳಕೆ

ಅಯೋಧ್ಯೆ: 115 ದೇಶಗಳ ನೀರು ಬಳಕೆ

ಅಯೋಧ್ಯೆ: 115 ದೇಶಗಳ ನೀರು ಬಳಕೆ
(ಸುದ್ದಿಕಿರಣ ವರದಿ)

ನವದೆಹಲಿ: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ವಿಶ್ವದ ಏಳು ಖಂಡಗಳ 115 ದೇಶಗಳ ನೀರು ಬಳಸಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಕಟಿಸಿದ್ದಾರೆ.

ವಸುದೈವ ಕುಟುಂಬಕಂ ಪರಿಕಲ್ಪನೆಯಲ್ಲಿ ಈ ಮಹತ್ಕಾರ್ಯ ನಡೆಯುತ್ತಿದೆ. ಈಗಾಗಲೇ ಕೆಲವು ದೇಶಗಳಿಂದ ನೀರು ಬಂದು ತಲುಪಿದ್ದು, ಅಲ್ಲಿನ ರಾಯಭಾರಿಗಳ ಸಮ್ಮುಖದಲ್ಲಿ ರಾಜನಾಥ್ ಸಿಂಗ್ ಹೊಸದಿಲ್ಲಿಯ ತಮ್ಮ ನಿವಾಸದಲ್ಲಿ ನೀರು ಸ್ವೀಕರಿಸಿದರು.

ಈಗಾಗಲೇ ಕೆಲವು ದೇಶಗಳಿಂದ ನೀರು ಬಂದು ತಲುಪಿದೆ. ಬಾಕಿ ಉಳಿದ 77 ರಾಷ್ಟ್ರಗಳ ನೀರನ್ನೂ ಎನ್.ಜಿ.ಒ ಸಂಗ್ರಹಿಸುತ್ತದೆ ಎಂಬ ವಿಶ್ವಾಸವಿದೆ. ಅದನ್ನು ರಾಮಲಲ್ಲಾನ ಜಲಾಭಿಷೇಕಕ್ಕೂ ಬಳಸಿಕೊಳ್ಳಲಾಗುವುದು ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಸಪ್ತಸಾಗರ ಎಂಬ ಸ್ಥಳವಿದೆ. ಶ್ರೀರಾಮನ ಪಟ್ಟಾಭಿಷೇಕ ಸಮಯದಲ್ಲಿ ಪ್ರಪಂಚದ ಎಲ್ಲ ಸಾಗರಗಳಿಂದ ನೀರು ತರಲಾಗಿತ್ತು ಎಂದು ರಾಮಾಯಣದಲ್ಲಿ ಉಲ್ಲೇಖವಿದೆ ಎಂದು ಸಚಿವ ಸಿಂಗ್ ತಿಳಿಸಿದರು.

ಡೆನ್ಮಾರ್ಕ್, ಫಿಜಿ, ನೈಜೀರಿಯಾ ಸೇರಿದಂತೆ ಹಲವು ರಾಷ್ಟ್ರಗಳ ರಾಜತಾಂತ್ರಿಕ ಅಧಿಕಾರಿಗಳು, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!