Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ವಿಶ್ವ ದಾಖಲೆಗಾಗಿ ಅಂತಾರಾಷ್ಟ್ರೀಯ ಆನ್ ಲೈನ್ ಕಾರ್ಯಕ್ರಮ

ವಿಶ್ವ ದಾಖಲೆಗಾಗಿ ಅಂತಾರಾಷ್ಟ್ರೀಯ ಆನ್ ಲೈನ್ ಕಾರ್ಯಕ್ರಮ

ಬ್ರಹ್ಮಾವರ: ಚೆನ್ನೈಯ ತಮಿಳುನಾಡು ಶಿಕ್ಷಕರ ಶಿಕ್ಷಣ ವಿಶ್ವವಿದ್ಯಾಲಯದೊಂದಿಗೆ ಇಲ್ಲಿನ ಕ್ರಾಸ್ ಲ್ಯಾಂಡ್ ಕಾಲೇಜು ಸೇರಿದಂತೆ ದೇಶದ 51 ಸಂಸ್ಥೆಗಳು, 51 ವಿಷಯಗಳು, 50 ಅತಿಥಿಗಳ ಸಹಯೋಗದೊಂದಿಗೆ ವಿಶ್ವ ದಾಖಲೆಯ 51 ಗಂಟೆಗಳ ಆನ್ ಲೈನ್ ಅಂತಾರಾಷ್ಟ್ರೀಯ ವರ್ಚುವಲ್ ಕಾರ್ಯಕ್ರಮ ಶುಕ್ರವಾರ ಆರಂಭಗೊಂಡು ಭಾನುವಾರ ಮುಕ್ತಾಯಗೊಂಡಿತು.

2030ರಲ್ಲಿ ಉನ್ನತ ಸ್ಥಾನಕ್ಕೆ ತಲುಪಲು ಜೀವನ ಕೌಶಲ್ಯ ಹೆಚ್ಚಿಸುವ ಪ್ರಾಮುಖ್ಯತೆ ವಿಷಯದ ಬಗ್ಗೆ ನಡೆದ ಈ ಮೆಗಾ ಈವೆಂಟ್ ನಲ್ಲಿ ತಮಿಳುನಾಡಿನ 49 ಸಂಸ್ಥೆಗಳು, ಹೊರರಾಜ್ಯದ ಕ್ರಿಸ್ಟ್ ವಿಶ್ವವಿದ್ಯಾನಿಲಯ ಮತ್ತು ಬ್ರಹ್ಮಾವರದ ಕ್ರಾಸ್ ಲ್ಯಾಂಡ್ ಕಾಲೇಜುಗಳು ಭಾಗವಹಿಸಿದ್ದವು.

ಕ್ರಾಸ್ ಲ್ಯಾಂಡ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಸ್ಯಾಮ್ಯುಯೆಲ್ ಸ್ಯಾಮುಯೆಲ್ ಮಾರ್ಗದರ್ಶನದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ| ರಾಬಟರ್್ ಕ್ಲೈವ್ ಸಂಯೋಜನೆಯಲ್ಲಿ ಸುಮಾರು ಒಂದು ಗಂಟೆ ಕಾಲ ಕಾಲೇಜಿನ ವತಿಯಿಂದ ಜೀವನ ಕೌಶಲ್ಯಗಳ ಮೂಲಕ ಸ್ಥಿತಿ ಸ್ಥಾಪಕತ್ವ ನಿರ್ಮಾಣ ವಿಷಯ ಕುರಿತು ಕಾರ್ಯಕ್ರಮ ನೀಡಲಾಯಿತು.

ವಿದ್ಯಾರ್ಥಿಗಳಾದ ಫಿಲಿಪ್, ಹಡ್ಸನ್, ಸುಷ್ಮಾ, ಡ್ಯಾನ್ ಜೋಸ್, ಆರ್ಷಾ ಜಾನ್ಸನ್, ಎಡ್ವಿನ್ ರೋಬಿನ್, ಟೆಸ್ ಝೇವಿಯರ್ ಜೀವನದಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ ಅವರು ಅಳವಡಿಸಿಕೊಂಡ ವಿಧಾನ ಮತ್ತು ಅದರಿಂದ ಅವರು ಹೇಗೆ ಯಶಸ್ಸು ಗಳಿಸಿದರು ಎನ್ನುವ ಬಗ್ಗೆ ಮಾತನಾಡಿದರು.

ಕಾಲೇಜಿನ ಪ್ರೊ. ರಿಬೂ ಸ್ಯಾಮುಯೆಲ್ ಸ್ವಾಗತಿಸಿದರು. ಉಪನ್ಯಾಸಕಿಯರಾದ ದೀಪಾ ರಾವ್ ವಂದಿಸಿ, ವರ್ಷಿತಾ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!