ಉಡುಪಿ: ಜಿಲ್ಲಾ ನೂತನ ಆಯುಷ್ ವೈದ್ಯಾಧಿಕಾರಿ ಡಾ. ಪ್ರಕಾಶ್ ನಾಯ್ಕ ಅವರನ್ನು ಈಚೆಗೆ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಡಾ. ಪ್ರಕಾಶ್ ನಾಯ್ಕ ಈ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಬಿ.ಎ.ಎಂ.ಎಸ್. ಶಿಕ್ಷಣವನ್ನು 1988- 1994ರಲ್ಲಿ ಪೂರೈಸಿದ್ದರು.
ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ಪರಿಚಯಿಸಿದರು.
ಸನ್ಮಾನಿತರಾದ ಡಾ. ಪ್ರಕಾಶ ನಾಯ್ಕ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಗುಣಮಟ್ಟದ ಕಲಿಕಾ ವ್ಯವಸ್ಥೆ ಕೊಂಡಾಡಿ, ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ. ಆಯುರ್ವೇದ ಕಾಲೇಜು ಪ್ರಾಂಶುಪಾಲೆ ಡಾ. ಮಮತಾ ಕೆ. ವಿ., ನೂತನ ಆಯುಷ್ ವೈದ್ಯಾಧಿಕಾರಿಗೆ ಶುಭ ಕೋರಿ, ಆಯುರ್ವೇದ ಸಂಶೋಧನೆಗಳಲ್ಲಿ ಜಿಲ್ಲಾ ಆಯುಷ್ ವಿಭಾಗದೊಂದಿಗೆ ಕಾಲೇಜಿನ ಪೂರ್ಣ ಸಹಕಾರದ ಭರವಸೆ ನೀಡಿದರು.