Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಗುರುವಿನ ಆಯ್ಕೆಯಲ್ಲಿ ಎಚ್ಚರ ಅಗತ್ಯ

ಗುರುವಿನ ಆಯ್ಕೆಯಲ್ಲಿ ಎಚ್ಚರ ಅಗತ್ಯ

ಉಡುಪಿ: ಕಲಿಯುಗದಲ್ಲಿ ಗುರುಗಳ ಆಯ್ಕೆ ಕಷ್ಟ. ಇದು ಮಹತ್ತರ ಪಾತ್ರ ವಹಿಸುತ್ತದೆ. ಸ್ವಲ್ಪ ಎಡವಿದರೂ ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಗುರುಗಳ ಆಯ್ಕೆಯಲ್ಲಿ ಎಚ್ಚರ ಅಗತ್ಯ ಎಂದು ಶ್ರೀ ರಮಾನಂದ ಗುರೂಜಿ ಹೇಳಿದರು.

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಗುರುಪೂರ್ಣಿಮೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗುರು ಪೂರ್ಣಿಮೆ ಪ್ರಯುಕ್ತ ಕ್ಷೇತ್ರದಲ್ಲಿ ಮನ್ಯು ನಾಮಕ ಶ್ರೀ ಲಕ್ಷ್ಮೀನರಸಿಂಹ ಯಾಗ ಕ್ಷೇತ್ರದ ಕೃಷ್ಣಮೂರ್ತಿ ತಂತ್ರಿ ನೇತೃತ್ವದಲ್ಲಿ ನೆರವೇರಿತು.

ಕ್ಷೇತ್ರದ ನಾಗಬನದಲ್ಲಿರುವ ಗುರು ಸಾನ್ನಿಧ್ಯದಲ್ಲಿ ವಿಶೇಷ ಪೂಜೆಯನ್ನು ಸ್ವಸ್ತಿಕ್ ಆಚಾರ್ಯ ನೆರವೇರಿಸಿದರು. ನೂರಾರು ಮಂದಿ ಭಕ್ತರು ಗುರು ಕಾಣಿಕೆ ಸಮರ್ಪಿಸಿ ಗುರು ವಂದನೆ ಸಲ್ಲಿಸಿದರು.

ದೇಶವು ಕೊರೊನಾ ಮುಕ್ತವಾಗಿ ಜನರು ನೆಮ್ಮದಿಯಿಂದ ಬಾಳುವಂತಾಗಲಿ ಎಂದು ಹಾರೈಸಿದರು.

ಕ್ಷೇತ್ರದ ಉಸ್ತುವಾರಿ ಕುಸುಮ ನಾಗರಾಜ ನಿರೂಪಿಸಿದರು. ಪ್ರಜ್ಞಾ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲೆ ಉಷಾ ರಮಾನಂದ, ಜೆಎಂಟಿ ಬಸ್ ಮಾಲಕ ಆನಂದ ಬಾಯಿರಿ, ಪ್ರಾಧ್ಯಾಪಕಿ ಸ್ವಾತಿ ಆಚಾರ್ಯ, ಮೃಣಾಲ್ ಕೃಷ್ಣ ಕಟ್ಟಡ ಗುತ್ತಿಗೆದಾರ ಪ್ರದೀಪ್, ದೀಪಕ್ ಕುಮಾರ್ ಸುರತ್ಕಲ್, ಗಣೇಶ ಅಂಬಲಪಾಡಿ, ಕೃಷ್ಣ ಹಳೆಯಂಗಡಿ, ಉಮೇಶ್, ಮಾಧವ ಶೆಟ್ಟಿಗಾರ್, ಜಗದೀಶ್ ಆಚಾರ್ಯ, ಗಣೇಶ್, ಸುಲೋಚನಾ ಶೆಟ್ಟಿ, ಗೀತಾ ಶೆಟ್ಟಿ, ಹರಿಣಿ ದಾಮೋದರ್, ಅಶ್ವಿನ್ ಕುಮಾರ್, ಛಾಯಾಗ್ರಾಹಕ ಚರಣ್ ರಾಜ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!