Wednesday, July 6, 2022
Home ಸಮಾಚಾರ `ಭಾರತೀಯರಿಗೆ ಜ. 1ರಿಂದ ಹೊಸ ವರ್ಷಾಚರಣೆ ಸೂಕ್ತವಲ್ಲ'

`ಭಾರತೀಯರಿಗೆ ಜ. 1ರಿಂದ ಹೊಸ ವರ್ಷಾಚರಣೆ ಸೂಕ್ತವಲ್ಲ’

`ಭಾರತೀಯರಿಗೆ ಜ. 1ರಿಂದ ಹೊಸ ವರ್ಷಾಚರಣೆ ಸೂಕ್ತವಲ್ಲ’
ಭಾರತೀಯರಿಗೆ ಡಿ. 31 ವರ್ಷದ ಕೊನೆಯ ದಿನವಲ್ಲ. ಅಂತೆಯೇ ಜ. 1ರಿಂದ ಹೊಸ ವರ್ಷದ ಆರಂಭವೂ ಅಲ್ಲ. ಭಾರತೀಯರಾಗಿ ನಾವು ಯುಗಾದಿ ಅಥವಾ ವಿಷುವಿನಿಂದ ಹೊಸ ವರ್ಷ ಆಚರಿಸಬೇಕು.
ಹಾಗಾಗಿ ಹೊಸ ವರ್ಷದ ಆಗಮನಕ್ಕೆ ಇನ್ನೂ ನಾಲ್ಕು ತಿಂಗಳು ಉಳಿದಿದೆ. ಭಾರತೀಯ ದಿನದರ್ಶಿಕೆ ಮೂಲಕ ನಾವು ದಿನ ಗಣನೆ ಮಾಡಬೇಕು.

ನಮಗೆ ಅಂಧಾನುಕರಣೆ ಬೇಡ. ನಮ್ಮ ದೇಶ, ನಮ್ಮ ನೆಲ ನಾವು ಭಾರತೀಯರು ಎಂಬ ನೆಲೆಯನ್ನು ಚಿಂತಿಸುವುದು ಅತೀ ಅಗತ್ಯ.

ನಮ್ಮ ದೇಶದಲ್ಲಿಯೇ ಇದ್ದುಕೊಂಡು, ನಮ್ಮ ಇಚ್ಛಾಶಕ್ತಿ ಹೀನ, ದೇಶಾಭಿಮಾನ ರಹಿತ, ಕೇವಲ ಸ್ವಾರ್ಥಪರ ರಾಜಕೀಯ ಪುಢಾರಿಗಳ ಆಶ್ರಯ ಪಡೆದುಕೊಂಡು, ಭಾರತೀಯ ಸಂಸ್ಕೃತಿಯ ಮೇಲೆ ನಿರಂತರವಾಗಿ ದಾಳಿ ಮಾಡಿರುವುದನ್ನು ಇತಿಹಾಸ ಸಾರಿ ಹೇಳುತ್ತಿದೆ.

ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ದೇಶ ಆಳುತ್ತಿದ್ದ ಅಧಿಕಾರ ಪಿಪಾಸುಗಳನ್ನು ಬಳಸಿಕೊಂಡು ಕುಲಗೆಡಿಸಲಾಗಿದೆ. ಅದರ ಪರಿಣಾಮ ಇಂದೂ ಕಾಣುತ್ತಿದ್ದೇವೆ. ಅದರ ನೇರ ದುಷ್ಪರಿಣಾಮ ನಮ್ಮ ಸಂಸ್ಕೃತಿಯ ಮೇಲಾಗಿದೆ.
ಹೀಗೆ, ನಮ್ಮ ದೌರ್ಬಲ್ಯವನ್ನೋ ಅಧಿಕಾರ ಆಮಿಷಾದಿಗಳನ್ನೋ ಬಳಸಿಕೊಂಡು ಸಂಸ್ಕೃತಿಯ ಮೇಲಾಗುತ್ತಿರುವ ದಬ್ಬಾಳಿಕೆ ತಡೆಗಟ್ಟೋಣ.

ನಮ್ಮ ಸಂಸ್ಕೃತಿಯ ಮೇಲೆ ಆದ ಕೆಲವು ಮುಖ್ಯ ದಬ್ಬಾಳಿಕೆಗಳಲ್ಲಿ ನಮ್ಮ ದೇಶೀಯ ಕ್ಯಾಲೆಂಡರ್/ ದಿನದರ್ಶಿಕೆ/ ಪಂಚಾಂಗವನ್ನು ನಮ್ಮ ದೈನಂದಿನ ವ್ಯವಹಾರದಿಂದ ದೂರಮಾಡಿದ್ದೂ ಒಂದು. ಮೊದಲು ನಮಗೆ ಅರ್ಥವಾಗದೇ ಆಗಿರುವ ಆವಾಂತರಗಳು, ಆನಂತರ ನಮ್ಮ ದೇಶ ಆಳುವವರ ಲೋಭಕ್ಕೆ ಬಲಿಯಾಗಿದ್ದು ಇದೇ ಪಂಚಾಂಗ/ ಕಾಲಗಣನ ವಿಜ್ಞಾನ. ಅದರ ದುಷ್ಪರಿಣಾಮ ಇಂದು ನಮ್ಮ ದೈನಂದಿನ ಜೀವನ ಹಾಗೂ ಧಾರ್ಮಿಕ ಆಚರಣೆಗಳ ಮೇಲೆಯೂ ಬಿದ್ದಿದೆ. ಇಂದು ನಾವು ಇದನ್ನು ಗಮನಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ದೇಶೀಯ ಸಂಸ್ಕೃತಿಯನ್ನು ಉಳಿಸೋಣ.

ಆಮ್ನಾಯ ಭಾರತೀಯ ದಿನದರ್ಶಿಕಾ ಪಂಚಾಂಗವನ್ನು ಎಲ್ಲೆಡೆ ಪಸರಿಸುವಲ್ಲಿ ಎಲ್ಲರೂ ಸಹಕರಿಸಿ, ಆ ಮೂಲಕ ಯುಗಾದಿ ಯಾ ವಿಷುದಿಂದಲೇ ಹೊಸ ವರ್ಷಾಚರಣೆಯನ್ನು ವಿಜೃಂಭಣೆಯಿಂದ ಮಾಡೋಣ.

ಡಾ| ವಿದ್ವಾನ್ ವಿನಾಯಕ ಭಟ್ಟ, ಗಾಳಿಮನೆ
ಆಮ್ನಾಯಃ – ಭಾರತೀಯ ದಿನದರ್ಶಿಕಾ ಪ್ರಚಾರಕರು
9449163561.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!