Thursday, July 7, 2022
Home ಸಮಾಚಾರ ಡಿಕೆಶಿ ಭೇಟಿ ಮಾಡಿದ ಪ್ರಮೋದ್

ಡಿಕೆಶಿ ಭೇಟಿ ಮಾಡಿದ ಪ್ರಮೋದ್

ಬೆಂಗಳೂರು: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬುಧವಾರ ಬೆಂಗಳೂರು ಕ್ವೀನ್ಸ್ ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿಗೆ ತೆರಳಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು. ಪ್ರಮೋದ್ ಅವರ ಈ ನಡೆ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಕಾರಣ, ಕಳೆದ ಭಾನುವಾರ (ನ. 29) ಉಡುಪಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಕೆಪಿಸಿಸಿ ಅಧ್ಯಕ್ಷನಾಗಿ ಡಿಕೆಶಿ ಅವರ ಉಡುಪಿ ಪ್ರಥಮ ಭೇಟಿ ಸಂದರ್ಭ ಪ್ರಮೋದ್ ಮಧ್ವರಾಜ್ ಗೈರಾಗಿದ್ದರು. ಈ ಬಗ್ಗೆ ಕಾಂಗ್ರೆಸ್ ನಲ್ಲಿಯೇ ತೀವ್ರ ಅಸಮಾಧಾನ ಕಂಡು ಬಂದಿತ್ತು. ಪ್ರಾಯಃ ಪ್ರಮೋದ್ ಕಾಂಗ್ರೆಸ್ ತೊರೆಯುತ್ತಾರೆ ಎಂಬ ಮಾತು ಪ್ರಮೋದ್ ಅಭಿಮಾನಿ ಬಳಗದ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಕೇಳಿ ಬಂದಿತ್ತು.
ಸಭೆಯಲ್ಲಿ ಮಾತನಾಡಿದ್ದ ಡಿಕೆಶಿ, ತನ್ನಿಂದಲೇ ಪಕ್ಷ ಎಂಬ ಭ್ರಮೆ ಯಾರಿಗೂ ಬೇಡ. ಚಾಡಿ ಮಾತಿಗೆ ನಾನು ಬೆಲೆ ಕೊಡೊಲ್ಲ. ಸಂಘಟನೆಯಲ್ಲಿ ಭಿನ್ನಾಭಿಪ್ರಾಯ ಬರುತ್ತದೆ, ಹೋಗುತ್ತದೆ. ಎಲ್ಲವೂ ಸೀಮಿತ ಚೌಕಟ್ಟಿನಲ್ಲಿರಬೇಕು, ಪರಸ್ಪರ ಸರಿಪಡಿಸಿಕೊಳ್ಳಬೇಕು. ಪಕ್ಷ ತೊರೆಯುವವರಿಗೆ ತಡೆಯಲಾಗದು, ಗೌರವದಿಂದ ಕಳಿಸಿಕೊಡೋಣ ಎಂದು ಖಡಕ್ ಸಂದೇಶ ನೀಡಿದ್ದರು.
ಉಭಯ ನಾಯಕರ ನಡುವಿನ ಭೇಟಿ ಉಡುಪಿ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!