Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ತಿಮ್ಮಪ್ಪನ ದರ್ಶನ ಮಾಡಿದ ಪೇಜಾವರಶ್ರೀ

ತಿಮ್ಮಪ್ಪನ ದರ್ಶನ ಮಾಡಿದ ಪೇಜಾವರಶ್ರೀ

ಉಡುಪಿ: ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಇಂದು ತಿರುಪತಿಗೆ ತೆರಳಿ ಶ್ರೀ ವೇಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.
ತಿರುಮಲ ತಿರುಪತಿ ದೇವಸ್ವಂ (ಟಿಟಿಡಿ) ವತಿಯಿಂದ ಶ್ರೀಗಳನ್ನು ಆದರಪೂರ್ವಕವಾಗಿ ಸ್ವಾಗತಿಸಲಾಯಿತು. ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ, ಸದಸ್ಯ ಡಿ. ಪಿ. ಅನಂತ್, ಅರ್ಚಕ ವರ್ಗದವರು ಇದ್ದರು.
ಈ ಸಂದರ್ಭದಲ್ಲಿ ಶ್ರೀಗಳು ಭೂವರಾಹಸ್ವಾಮಿಯ ದರ್ಶನವನ್ನೂ ಪಡೆದರು.
ಲೋಕಕ್ಕೆ ಒದಗಿದ ಕೊರೊನಾ ವಿಪತ್ತು ದೂರವಾಗಿ ಉತ್ತಮ ಆರೋಗ್ಯ, ಶಾಂತಿ, ನೆಮ್ಮದಿ ಎಲ್ಲರಿಗೂ ಲಭಿಸಲಿ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರ ಕಾರ್ಯ ಸುಸೂತ್ರವಾಗಿ ನಡೆಯಲಿ ಎಂದು ಶ್ರೀ ವೆಂಕಟೇಶನಲ್ಲಿಯೂ ಪ್ರಾರ್ಥಿಸಿರುವುದಾಗಿ ಶ್ರೀಗಳು ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!