Friday, January 28, 2022
Home ಸಮಾಚಾರ ಜಿಲ್ಲಾ ಸುದ್ದಿ ಕೊಡವೂರು ಬ್ರಾಹ್ಮಣ ಮಹಾಸಭಾ: ದೀಪಾವಳಿ ಪರ್ಬ, ಮಕ್ಕಳ ದಿನಾಚರಣೆ ಸಂಭ್ರಮ

ಕೊಡವೂರು ಬ್ರಾಹ್ಮಣ ಮಹಾಸಭಾ: ದೀಪಾವಳಿ ಪರ್ಬ, ಮಕ್ಕಳ ದಿನಾಚರಣೆ ಸಂಭ್ರಮ

ಕೊಡವೂರು ಬ್ರಾಹ್ಮಣ ಮಹಾಸಭಾ: ದೀಪಾವಳಿ ಪರ್ಬ, ಮಕ್ಕಳ ದಿನಾಚರಣೆ ಸಂಭ್ರಮ

ಮಲ್ಪೆ, ನ. 16 (ಸುದ್ದಿಕಿರಣ ವರದಿ): ನಮ್ಮ ಸಂಸ್ಕೃತಿ, ನಮ್ಮ ಆಚಾರ ವಿಚಾರ ಹಾಗೂ ಹಬ್ಬ ಹರಿದಿನಗಳ ವಿಶಿಷ್ಟತೆಗಳನ್ನು ಅರಿತು, ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು ಆಚರಿಸಿದಾಗ ಆ ಹಬ್ಬದ ಮಹತ್ವದ ಅರಿವಾಗುತ್ತದೆ. ಈ ನಿಟ್ಟಿನಲ್ಲಿ ಕೊಡವೂರು ಬ್ರಾಹ್ಮಣ ಮಹಾಸಭಾ ಕಳೆದ ಹಲವಾರು ವರ್ಷಗಳಿಂದ ತಮ್ಮವರನ್ನು ಕೂಡಿಕೊಂಡು ಆಚರಿಸಿಕೊಂಡು ಬರುತ್ತಿರುವ ದೀಪಾವಳಿ ಪರ್ಬ ಆಚರಣೆ ಶ್ಲಾಘನೀಯ ಎಂದು ಉಡುಪಿ ಯುವ ಬ್ರಾಹ್ಮಣ ಪರಿಷತ್ತು ಅಧ್ಯಕ್ಷ ಚೈತನ್ಯ ಎಂ. ಜಿ. ಹೇಳಿದರು.

ಕೊಡವೂರು ವಿಪ್ರಶ್ರೀ ಸಭಾಂಗಣದಲ್ಲಿ ಕೊಡವೂರು ಬ್ರಾಹ್ಮಣ ಮಹಾಸಭಾ ದಿನಪೂರ್ತಿ ಆಯೋಜಿಸಿದ್ದ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದ ಅವರು, ರಜತ ಮಹೋತ್ಸವದ ಸಂಭ್ರಮದಲ್ಲಿರುವ ಈ ಸಂಸ್ಥೆ ಈಗಾಗಲೇ 28 ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದರು.

ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಾರಾಯಣ ಬಲ್ಲಾಳ್ ಸ್ವಾಗತಿಸಿ, ರಜತ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಭಟ್ ಪ್ರಸ್ತಾವನೆಗೈದರು.

ಮಕ್ಕಳು, ಪುರುಷರು ಹಾಗು ವನಿತೆಯರಿಗಾಗಿ ಹಲವಾರು ಒಳಾಂಗಣ ಕ್ರೀಡೆಗಳು ನಡೆದವು.

ದೀಪಿಕಾ ಬಲ್ಲಾಳ್ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ರಾವ್ ವಂದಿಸಿದರು. ಕಾರ್ಯದರ್ಶಿ ಶ್ರೀನಿವಾಸ ಬಾಯರಿ ಇದ್ದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!