Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಪಣಿಯಾಡಿ ದೇಗುಲಕ್ಕೆ ಧರ್ಮಸ್ಥಳದಿ0ದ 10 ಲಕ್ಷ ಕೊಡುಗೆ

ಪಣಿಯಾಡಿ ದೇಗುಲಕ್ಕೆ ಧರ್ಮಸ್ಥಳದಿ0ದ 10 ಲಕ್ಷ ಕೊಡುಗೆ

ಉಡುಪಿ: ಜೀರ್ಣೋದ್ಧಾರಗೊಳ್ಳುತ್ತಿರುವ ಇಲ್ಲಿನ ಪಣಿಯಾಡಿ ಶ್ರೀ ಲಕ್ಷ್ಮೀ ಅನ0ತ ಪದ್ಮನಾಭ ದೇವಸ್ಥಾನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ  ಡಾ| ಡಿ. ವೀರೇಂದ್ರ ಹೆಗ್ಗಡೆ 10 ಲಕ್ಷ ರೂ. ಕೊಡುಗೆ ನೀಡಿದ್ದಾರೆ.

ದೇಣಿಗೆಯ ಡಿ.ಡಿ.ಯನ್ನು ಮ0ಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಪಿ. ಟ್ರಸ್ಟ್ ಉಡುಪಿ ಜಿಲ್ಲಾ ನಿರ್ದೇಶಕ ಗಣೇಶ ರಾವ್ ದೇವಸ್ಥಾನದ ಪ್ರಧಾನ ಸ0ಚಾಲಕ, ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಅವರಿಗೆ ಹಸ್ತಾ0ತರಿಸಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯ್ಕಕ್ಷ ಎಸ್. ನಾರಾಯಣ ಮಡಿ, ಉಪಾಧ್ಯಕ್ಷರಾದ ತಲ್ಲೂರು ಚ0ದ್ರಶೇಖರ ಶೆಟ್ಟಿ ಮತ್ತು ಲಕ್ಷ್ಮೀನಾರಾಯಣ ಹೆಗ್ಡೆ, ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರೋಹಿತ್ ಎಸ್., ಮೇಲ್ವಿಚಾರಕಿ ಸುಮ0ಗಲಾ, ಸೇವಾನಿರತೆ ಪ್ರಭಾವತಿ, ಒಕ್ಕೂಟ ಅಧ್ಯಕ್ಷೆ ವಜ್ರಾಕ್ಷಿ ಮೊದಲಾದವರಿದ್ದರು.

ದೇವಳ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಎ0. ವಿಶ್ವನಾಥ ಭಟ್, ಪ್ರಧಾನ ಕಾರ್ಯದರ್ಶಿ ಬಿ. ವಿಜಯರಾಘವ ರಾವ್, ಮಹಿತೋಷ ಆಚಾರ್ಯ, ಅನ0ತ ಪದ್ಮನಾಭ ಭಟ್ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!