Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ನಾಗರಿಕ ಅರಿವಿಗೆ ಅಮೃತ ಮಹೋತ್ಸವ ಬಳಕೆಯಾಗಲಿ

ನಾಗರಿಕ ಅರಿವಿಗೆ ಅಮೃತ ಮಹೋತ್ಸವ ಬಳಕೆಯಾಗಲಿ

ನಾಗರಿಕ ಅರಿವಿಗೆ ಅಮೃತ ಮಹೋತ್ಸವ ಬಳಕೆಯಾಗಲಿ

(ಸುದ್ದಿಕಿರಣ ವರದಿ)
ಉಡುಪಿ: ಸಂವಿಧಾನ, ಪ್ರಜಾಪ್ರಭುತ್ವ, ನಾಗರಿಕ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಸಾಧ್ಯವಾದಷ್ಟು ವ್ಯಾಜ್ಯಗಳನ್ನು ಕೋರ್ಟಿನಿಂದ ಹೊರಗೆ ಬಗೆಹರಿಸುವ ಬಗ್ಗೆ ಗಮನಹರಿಸಬೇಕಾಗಿದೆ. ಗಾಂಧೀಜಿ ಕಲಿಸಿದ ಶಾಂತಿಯುತ ಹೋರಾಟದ ಮಹತ್ವವನ್ನು ಮನವರಿಕೆ ಮಾಡಬೇಕಾಗಿದೆ. ಇದು ರಾಜಕೀಯೇತರ ಸಂಘಟನೆಗಳ ಮೂಲಕ ಅಮೃತ ಮಹೋತ್ಸವದ ನೆಪದಲ್ಲಿ ನಡೆಯಬೇಕಾಗಿದೆ ಎಂದು ಮಾನವ ಹಕ್ಕು ಸಂರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನುಭಾಗ್ ಆಶಿಸಿದರು.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಪ್ರಯುಕ್ತ 75 ಅರಿವು ಸರಣಿ ಕಾರ್ಯಕ್ರಮಗಳ ಅನುಷ್ಠಾನ ಉದ್ಘಾಟಿಸಿ ಮಾತನಾಡಿದರು.

ತೆಂಕನಿಡಿಯೂರು ಕಾಲೇಜು ಪ್ರಾಂಶುಪಾಲ ಡಾ| ಗಣನಾಥ ಎಕ್ಕಾರು 75 ಕಾರ್ಯಕ್ರಮಗಳ ಅನುಷ್ಠಾನದ ವಿವರ ನೀಡಿ ಪ್ರಸ್ತಾವಿಕವಾಗಿ ಮಾತನಾಡಿದರು.

ವೈಕುಂಠ ಬಾಳಿಗ ಕಾಲೇಜು ಪ್ರಾಂಶುಪಾಲೆ ಡಾ| ನಿರ್ಮಲ ಕುಮಾರಿ ಸ್ವಾಗತಿಸಿದರು. ಉಪನ್ಯಾಸಕ ಡಾ. ರಘುನಾಥ ವಂದಿಸಿದರು. ಡಾ| ದುಗ್ಗಪ್ಪ ಕಜೆಕಾರ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!