Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ನಿವೃತ್ತ ಇಂಜಿನಿಯರ್ ಗೆ ವಿದಾಯ

ನಿವೃತ್ತ ಇಂಜಿನಿಯರ್ ಗೆ ವಿದಾಯ

ಉಡುಪಿ: ಇಲ್ಲಿನ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಟಿ. ಎಂ. ಮಂಜೇಗೌಡ ಸೇವಾ ನಿವೃತ್ತರಾಗಿದ್ದು, ಈಚೆಗೆ ನಡೆದ ಸಮಾರಂಭದಲ್ಲಿ ಅವರಿಗೆ ವಿದಾಯ ಕೋರಲಾಯಿತು.

ಇಲಾಖೆಯ ಕಾರವಾರ ಅಧೀಕ್ಷಕ ಇಂಜಿನಿಯರ್ ಚಂದ್ರಶೇಖರ್ ಸನ್ಮಾನಿಸಿ, ನೌಕರರು ಪ್ರಾಮಾಣಿಕತೆಯಿಂದ ಸೇವೆ ನೀಡಿದಲ್ಲಿ ಸಂಸ್ಥೆಯ ಅಭಿವೃದ್ಧಿಯೊಂದಿಗೆ ಸ್ವಂತ ಅಭಿವೃದ್ಧಿಯೂ ಸಾಧ್ಯ ಎಂದರು.

ಇಲಾಖೆಯಲ್ಲಿ ಸುಮಾರು 34 ವರ್ಷ ಕಾಲ ವಿವಿಧ ಹುದ್ದೆಗಳಲ್ಲಿ ಬೆಂಗಳೂರು, ಮಂಡ್ಯ, ಮಂಗಳೂರು ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕಾರವಾರ ಮತ್ತು ಉಡುಪಿಯಲ್ಲಿ ಸೇವೆ ಸಲ್ಲಿಸಿದ್ದ ಟಿ. ಎಂ. ಮಂಜೇಗೌಡ ಅವರ ನಿವೃತ್ತ ಜೀವನ ಸುಖಮಯವಾಗಲಿ ಎಂದು ಆಶಿಸಿದರು.

ಗೌರವ ಸ್ವೀಕರಿಸಿದ ಮಂಜೇಗೌಡ, ಪ್ರಾಮಾಣಿಕತೆ ಹಾಗೂ ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದಲ್ಲಿ ಅಧಿಕಾರ ನಮ್ಮನ್ನರಸಿ ಬರುತ್ತದೆ ಎಂದರು.

ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್, ಲೋಕೋಪಯೋಗಿ ವಿಭಾಗ ಉಡುಪಿ ಹಿರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮದಾಸ ಆಚಾರ್ಯ, ಮಾಧವ ಕಾರಂತ, ರಮಾನಾಥ ಭಟ್, ವೀರಣ್ಣ ಸಾಹುಕಾರ್, ಭಾನುಪ್ರಕಾಶ್ ಅತ್ತಾವರ, ಗುತ್ತಿಗೆದಾರ ಫಿಲಿಪ್ ಡಿ’ಕೋಸ್ತಾ ಕುಂದಾಪುರ ಇದ್ದರು.
ಇಲಾಖೆಯ ಕಾರವಾರ ಇಂಜಿನಿಯರ್ ಟಿ. ಎಸ್. ಪಾಯದೆ ಸ್ವಾಗತಿಸಿದರು. ವಿಜಯ ಶೆಟ್ಟಿ ನಿರೂಪಿಸಿದರು. ಸಹಾಯಕ ಇಂಜಿನಿಯರ್ ಟಿ. ಆರ್. ಮೊಳಹಳ್ಳಿ ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!