Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ನೀಲಾವರ ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿದ ಡಿಸಿ

ನೀಲಾವರ ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿದ ಡಿಸಿ

ನೀಲಾವರ ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿದ ಡಿಸಿ

ಬ್ರಹ್ಮಾವರ, ನ. 4 (ಸುದ್ದಿಕಿರಣ ವರದಿ): ದೀಪಾವಳಿ ಪ್ರಯುಕ್ತ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್ ಗುರುವಾರ ನೀಲಾವರ ಗೋಶಾಲೆಗೆ ಭೇಟಿ ನೀಡಿ ಗೋಪೂಜೆ ನೆರವೇರಿಸಿದರು.

ಪಶುಸಂಗೋಪನೆ ಇಲಾಖೆ ನಿವೃತ್ತ ಉಪನಿರ್ದೇಶಕರಾದ ಡಾ. ಸರ್ವೋತ್ತಮ ಉಡುಪ ಮತ್ತು ಡಾ. ಮಹೇಶ್ ಶೆಟ್ಟಿ, ಉಪನಿರ್ದೇಶಕ ಡಾ. ಶಂಕರ ಶೆಟ್ಟಿ, ಇಲಾಖೆಯ ಹೆಚ್ಚುವರಿ ಉಪನಿರ್ದೇಶಕ ಡಾ. ಸಂದೀಪ್ ಶೆಟ್ಟಿ, ಬ್ರಹ್ಮಾವರ ತಾಲೂಕು ಸಹಾಯಕ ನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ, ಬ್ರಹ್ಮಾವರ ತಾಲೂಕು ಪಶುವೈದ್ಯಾಧಿಕಾರಿ ಡಾ. ವಿಜಯಕುಮಾರ್, ಡಾ. ಮಂಜುನಾಥ ಅಡಿಗ, ಸಿಬಂದಿಗಳಾದ ಶ್ರೀಧರ ನಾಯಕ್, ಬಾಲಕೃಷ್ಣ ಶೆಟ್ಟಿ, ಉದಯ ಗಾಣಿಗ, ಪುರುಷೋತ್ತಮ ಮಧ್ಯಸ್ಥ ಮತ್ತು ಲಕ್ಷ್ಮೀನಾರಾಯಣ, ಗೋಶಾಲೆ ವ್ಯವಸ್ಥಾಪಕ ನರಸಿಂಹ ಭಟ್, ವಾಸುದೇವ ಭಟ್ ಪೆರಂಪಳ್ಳಿ, ಸುಬ್ರಹ್ಮಣ್ಯ ಮೊದಲಾದವರಿದ್ದರು.

ಅರ್ಚಕರಾದ ರಾಘವೇಂದ್ರ ಭಟ್ ಮತ್ತು ಪ್ರಶಾಂತ ಭಟ್ ಪೂಜಾ ವಿಧಿ ನೆರವೇರಿಸಿ, ಪ್ರಸಾದ ನೀಡಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!