Friday, January 28, 2022
Home ಸಮಾಚಾರ ಸಂಘಸಂಗತಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಪದಾಧಿಕಾರಿಗಳ ಆಯ್ಕೆ

ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಪದಾಧಿಕಾರಿಗಳ ಆಯ್ಕೆ

ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಪದಾಧಿಕಾರಿಗಳ ಆಯ್ಕೆ

ಉಡುಪಿ, ನ. 29 (ಸುದ್ದಿಕಿರಣ ವರದಿ): ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಈಚೆಗೆ ಇಲ್ಲಿನ ಶೋಕಮಾತಾ ಚರ್ಚ್ ಸಭಾಂಗಣದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಎಂ. ಎಸ್. ಖಾನ್ ಹೂಡೆ ಮತ್ತು ಕಾರ್ಯದರ್ಶಿಯಾಗಿ ಸಿರಿಲ್ ಮೊಂತೆರೊ ಕೊಳಲಗಿರಿ ಆಯ್ಕೆಯಾದರು.

ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷ- ರೋಬರ್ಟ್ ಮಿನೇಜಸ್ ಕಣಜಾರು, ಕೋಶಾಧಿಕಾರಿ- ಲೂವಿಸ್ ಅಲ್ಮೆಡಾ ಮಣಿಪಾಲ, ಸಹ ಕಾರ್ಯದರ್ಶಿ- ಕೆ. ಪಿ. ಇಬ್ರಾಹಿಂ, ಸಹ ಕೋಶಾಧಿಕಾರಿ- ಸೆವ್ರಿನ್ ಡೇಸಾ,ಸಲಹೆಗಾರರು- ರೆ. ಫಾ| ಚಾರ್ಲ್ಸ್ ಮಿನೇಜಸ್, ಬೈಕಾಡಿ ಹುಸೇನ್ ಹಾಗೂ ಫಾರೂಕ್ ಕಾರ್ಕಳ ಆಯ್ಕೆಯಾದರು.

ನಿರ್ಗಮನ ಅಧ್ಯಕ್ಷೆ ಸೆವ್ರಿನ್ ಡೇಸಾ ಸ್ವಾಗತಿಸಿ, ಕಾರ್ಯದರ್ಶಿ ಎಂ. ಎಸ್. ಖಾನ್ ವಾರ್ಷಿಕ ವರದಿ ಮಂಡಿಸಿದರು. ಮಾಜಿ ಅಧ್ಯಕ್ಷ ಡಾ| ಜೆರಾಲ್ಡ್ ಪಿಂಟೋ ಚುನಾವಣಾಧಿಕಾರಿಯಾಗಿದ್ದರು. ನೂತನ ಕಾರ್ಯದರ್ಶಿ ಸಿರಿಲ್ ಮೊಂತೆರೂ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!