Saturday, July 2, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಪದ್ಮ ಪ್ರಶಸ್ತಿ ನಾಮನಿರ್ದೇಶನಕ್ಕೆ ಮನವಿ

ಪದ್ಮ ಪ್ರಶಸ್ತಿ ನಾಮನಿರ್ದೇಶನಕ್ಕೆ ಮನವಿ

ನವದೆಹಲಿ: ಪ್ರತಿಷ್ಠಿತ ಪದ್ಮ ಪ್ರಶಸ್ತಿಗೆ ಸೂಕ್ತವೆನಿಸುವ ವ್ಯಕ್ತಿ ನಿಮಗೆ ತಿಳಿದಿದ್ದಲ್ಲಿ ಅಂಥವರ ಹೆಸರು ಸೂಚಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಬಾರತದ ಹಲವು ಕ್ಷೇತ್ರಗಳಲ್ಲಿ ಅನೇಕ ಪ್ರತಿಭಾವಂತ ವ್ಯಕ್ತಿಗಳಿದ್ದಾರೆ. ಅಸಾಧಾರಣ ಎನ್ನುವಂಥ ಕೆಲಸ ಮಾಡಿರುತ್ತಾರೆ. ಅಂಥ ಬಗ್ಗೆ ಹೆಚ್ಚೇನೂ ತಿಳಿದಿರುವುದಿಲ್ಲ. ಎಲೆಮರೆ ಕಾಯಿಯಂತಿರುವ ಅವರನ್ನು ಮನ್ನಿಸುವುದು ಮುಖ್ಯ. ಅಂಥ ಸ್ಪೂರ್ತಿದಾಯಕ ಜನರು ನಿಮಗೆ ತಿಳಿದಿದ್ದರೆ ನೀವು ಅವರನ್ನು #PeoplesPadma ಹ್ಯಾಶ್ ಟ್ಯಾಗ್ ಬಳಸಿ ನಾಮನಿರ್ದೇಶನ ಮಾಡಬಹುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಸೆ. 15ರ ವರೆಗೆ ನಾಮನಿರ್ದೇಶನ ಮಾಡಬಹುದಾಗಿದ್ದು, ಪದ್ಮ ಅವಾರ್ಡ್ಸ್ ವೆಬ್ ಸೈಟ್ನ ಲಿಂಕ್ ಕೂಡಾ ಬಳಸಬಹುದು ಎಂದವರು ಪೋಸ್ಟ್ ಮಾಡಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!