Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಜನಾರ್ದನ ಭಂಡಾರ್ಕರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಜನಾರ್ದನ ಭಂಡಾರ್ಕರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಜನಾರ್ದನ ಭಂಡಾರ್ಕರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಉಡುಪಿ: ಈಚೆಗೆ ನಿಧನರಾದ ಉಡುಪಿ ನಗರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಜನಾರ್ದನ ಭಂಡಾರ್ಕರ್ ಅವರಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಉಡುಪಿ ನಗರಸಭೆ ವಿಪಕ್ಷ ನಾಯಕ ರಮೇಶ ಕಾಂಚನ್ ನೇತೃತ್ವದಲ್ಲಿ ನಗರದ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನುಡಿನಮನ ಸಲ್ಲಿಸಿ, ಭಂಡಾರ್ಕರ್ ಅವರ ಪಕ್ಷ ನಿಷ್ಠೆಯನ್ನು ಸ್ಮರಿಸಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲು ಮತ್ತು ಕುಶಲ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಬ್ಲಾಕ್ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದಿವಾಕರ ಕುಂದರ್, ಕಡೆಕಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ನವೀನ್ ಶೆಟ್ಟಿ, ಕಡೆಕಾರ್ ಗ್ರಾಮ ಪಂಚಾಯತ್ ಸದಸ್ಯ ತಾರಾನಾಥ ಕಡೆಕಾರ್, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮಣ ಪೂಜಾರಿ, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಎಸ್.ಸಿ ಘಟಕ ಅಧ್ಯಕ್ಷ ಗಣೇಶ್ ನೆರ್ಗಿ, ನಗರಸಭಾ ಸದಸ್ಯರಾದ ವಿಜಯ್ ಪೂಜಾರಿ, ನಗರಸಭಾ ಸದಸ್ಯರಾದ ಸಂಧ್ಯಾ ತಿಲಕ್ ಮತ್ತು ಶೋಭಾ ಕಕ್ಕುಂಜೆ, ಜನಾರ್ದನ ಭಂಡಾರ್ಕರ್ ಪುತ್ರಿ ಕೀರ್ತನಾ ಭಂಡಾರ್ಕರ್, ಪಕ್ಷ ಪ್ರಮುಖರಾದ ಅಮೃತ್ ಶೆಣೈ, ಮಾಧವ ಬನ್ನಂಜೆ, ಸುರಯ್ಯ ಅಂಜುಮ್, ಮೋಹನಚಂದ್ರ ನಂಬಿಯಾರ್, ಸತೀಶ್ ಪುತ್ರನ್, ಲಕ್ಷ್ಮಣ ಪೆರಂಪಳ್ಳಿ, ಸಾಧನಾ ಕಿಣಿ, ಲಕ್ಷ್ಮೀಕಾಂತ್ ಬೆಸ್ಕೂರು, ರಘುಪತಿ ಬಳ್ಳಾಲ್, ಭಾಸ್ಕರ ರಾವ್ ಕಿದಿಯೂರು, ಕೀರ್ತಿ ಶೆಟ್ಟಿ, ಸತೀಶ್ ಕೊಡವೂರು, ಸತೀಶ್ ಕುಮಾರ್ ಮಂಚಿ, ಪ್ರಕಾಶ್ ಆಂದ್ರಾದೆ, ಗಣೇಶ್ ದೇವಾಡಿಗ, ಹಮ್ಮಾದ್, ವೆಂಕಟೇಶ್ ಪೆರಂಪಳ್ಳಿ, ಮ್ಯಾಕ್ಸಿಮ್ ಡಿ’ಸೋಜಾ, ಗೋವರ್ಧನ ಅಮೀನ್, ಡಿಯೋನ್ ಡಿ’ಸೋಜಾ, ಉದಯ ಮೂಡುಬೆಟ್ಟು, ಸದಾಶಿವ ಕಟ್ಟೆಗುಡ್ಡೆ, ಪ್ರಶಾಂತ್ ಪೂಜಾರಿ, ಚಂದ್ರಕಾಂತ ನಾಯಕ್, ಶಶಿರಾಜ್ ಕುಂದರ್, ಜಯಾನಂದ್, ಬಾಲಕೃಷ್ಣ ಶೆಟ್ಟಿ, ಜ್ಯೋತಿ ಹೆಬ್ಬಾರ್, ಸವಿತಾ ಶೆಣೈ, ಸಾಯಿರಾಜ್ ಕಿದಿಯೂರು, ಶೇಖರ್ ಶೆಟ್ಟಿ, ಸುದೇಶ್ ಶೇಟ್, ಲಕ್ಷ್ಮೀಶ ಶೆಟ್ಟಿ, ಅನಂತಕೃಷ್ಣ ಪ್ರಭು, ಸಂಜಯ್ ಆಚಾರ್ಯ, ಪ್ರದೀಪ್ ಶೇರಿಗಾರ್, ಶ್ರೀದೇವಿ ಕುಂದರ್, ದೇವು ಕಲ್ಮಾಡಿ ಹಾಗೂ ಪಕ್ಷ ಕಾರ್ಯಕರ್ತರು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!