Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ಮದ್ಯದಂಗಡಿ ನಿರ್ಬಂಧಕ್ಕೆ ವಿರೋಧ

ಮದ್ಯದಂಗಡಿ ನಿರ್ಬಂಧಕ್ಕೆ ವಿರೋಧ

ಮದ್ಯದಂಗಡಿ ನಿರ್ಬಂಧಕ್ಕೆ ವಿರೋಧ

ಉಡುಪಿ, ಡಿ. 26 (ಸುದ್ದಿಕಿರಣ ವರದಿ): ಹೊಸ ವರ್ಷಾಚರಣೆ ವೇಳೆ ಬಾರ್, ಪಬ್ ರೆಸ್ಟೋರೆಂಟ್ ಗಳನ್ನು ನಿರ್ಭಂಧಿಸಿರುವ ರಾಜ್ಯ ಸರಕಾರದ ಆದೇಶದ ವಿರುದ್ಧ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರಕಾರ ರಾತ್ರಿ 10 ಗಂಟೆಗೆ ಬಂದ್ ಮಾಡಲು ಆದೇಶಿಸಿದೆ. ಶೇ. 50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ಎಂದು ಹೇಳಿದೆ. ಈಗಾಗಲೇ ನಾವು ಎರಡು ವರ್ಷ ಪಟ್ಟ ಬವಣೆಯನ್ನು ಈಗಾಗಲೇ ಸರಕಾರಕ್ಕೆ ಮನವಿ ಮೂಲಕ, ಮೌಖಿಕವಾಗಿಯೂ ಸಂಕಷ್ಟ ಹೇಳಿಕೊಳ್ಳಲಾಗಿದೆ. ಆದರೂ ಏನೂ ಪ್ರಯೋಜನವಾಗಿಲ್ಲ.

ರಾಜ್ಯದಲ್ಲಿ 5 ಸಾವಿರಕ್ಕೂ ಮಿಕ್ಕಿ ಬಾರ್ ಅಂಡ್ ರೆಸ್ಟೋರೆಂಟ್ ಗಳಿದ್ದು, ಲಾಕ್ ಡೌನ್ ವೇಳೆ ನಾವು ತುಂಬಾ ನಷ್ಟ ಅನುಭವಿಸಿದ್ದೇವೆ. ಸರಕಾರ ಕೇವಲ ಸರಕಾರ ಆದಾಯ ಲೆಕ್ಕ ಹಾಕುತ್ತಿದೆ. ಆದರೆ, ನಮಗೆ ಆಗಿರುವ ನಷ್ಟವನ್ನು ಯಾರು ಲೆಕ್ಕ ಹಾಕಿಲ್ಲ. ನಮಗೆ ಆದ ನಷ್ಟ ಸರಿದೂಗಿಸಿಕೊಳ್ಳಲು ಅವಕಾಶ ಕೊಡುವುದರೊಂದಿಗೆ ಡಿ. 31 ಮತ್ತು ಜ. 1ರಂದು ಪೂರ್ಣಾವಧಿ ಮದ್ಯ ಮಾರಾಟಕ್ಕೆ ಅವಕಾಶ ಕೊಡುವಂತೆ ಆಗ್ರಹಿಸಿದರು.

ರಸ್ತೆಯಲ್ಲಿ ನಡೆಯುವ ಆಚರಣೆಗಳನ್ನು ನಿರ್ಬಂಧಿಸಲು ನಮ್ಮ ಅಡ್ಡಿಯಿಲ್ಲ. ಅದೇ ರೀತಿ ವ್ಯಾಪಾರ ಮಾಡಲು ಅವಕಾಶ ಕೊಟ್ಟರೆ ಲೈಸೆನ್ಸುದಾರರು ಚೇತರಿಸಿಕೊಳ್ಳುತ್ತೇವೆ. ನಮಗೆ ವ್ಯಾಪಾರ ನಡೆಯುವುದೇ ಈ ಎರಡು ದಿನಗಳಲ್ಲಿ.

ಆದ್ದರಿಂದ ಮುಖ್ಯಮಂತ್ರಿ, ಅಬಕಾರಿ ಸಚಿವರು ಇತ್ತ ಗಮನಹರಿಸಬೇಕಿದೆ. ನೌಕರರ ಕಷ್ಟ ಗಮನಿಸಿ, ಆದೇಶದಲ್ಲಿ ಮಾರ್ಪಾಡು ಮಾಡಿ. ವ್ಯಾಪಾರ ಮಾಡಲು ಅವಕಾಶ ಕೊಡಿ ಎಂದು ಕೇಳುವುದು ಆಸೆಯಿಂದಲ್ಲ. ನಷ್ಟ ಸರಿದೂಗಿಸಿಕೊಳ್ಳುವ ಅವಕಾಶ ಕೊಡಿ ಎಂದು ಗೋವಿಂದರಾಜ್ ಹೆಗ್ಡೆ ಮನವಿ ಮಾಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!