Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಮುಜರಾಯಿ ಸಚಿವೆಯ ಭೇಟಿ

ಮುಜರಾಯಿ ಸಚಿವೆಯ ಭೇಟಿ

ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 19

ಮುಜರಾಯಿ ಸಚಿವೆಯ ಭೇಟಿ
ಉಡುಪಿ: ಕೊಡವೂರು ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಾಧು ಸಾಲಿಯಾನ್ ನೇತೃತ್ವದಲ್ಲಿ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಬೆಂಗಳೂರಿನ ವಿಕಾಸಸೌಧದ ಅವರ ಕಚೇರಿಯಲ್ಲಿ ಭೇಟಿಯಾಗಿ ದೇವಸ್ಥಾನದ ಮುಂದಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿ, ಮನವಿ ಸಲ್ಲಿಸಲಾಯಿತು.

ದೇವಳದ ಟ್ರಸ್ಟಿಗಳಾದ ಸುಧೀರ್ ರಾವ್ ಕೊಡವೂರು, ಜೀವನ್ ಪಾಳೆಕಟ್ಟೆ ಮತ್ತು ಗೋವಿಂದ ಪಾಲನ್ ಇದ್ದರು.

ಸಚಿವೆ ಜೊಲ್ಲೆ ಅವರಿಗೆ ಶ್ರೀದೇವರ ಗಂಧ ಪ್ರಸಾದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!