Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಯೋಗ ದಿನ ಅಂಚೆ ಚೀಟಿ ಬಿಡುಗಡೆ

ಯೋಗ ದಿನ ಅಂಚೆ ಚೀಟಿ ಬಿಡುಗಡೆ

ಉಡುಪಿ: ಭಾರತೀಯ ಅಂಚೆ ಇಲಾಖೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಉಡುಪಿ ಸೇರಿದಂತೆ ದೇಶದ ಸುಮಾರು 810 ಪ್ರಧಾನ ಅಂಚೆ ಕಚೇರಿಗಳಲ್ಲಿ ಯೋಗ ದಿನದ ಲಾಂಛನವಿರುವ ವಿಶೇಷ ಸ್ಟಾಂಪ್ ಕ್ಯಾನ್ಸಲೇಷನ್ (ವಿಶೇಷ ಅಂಚೆ ರದ್ಧತಿ ಮೊಹರು) ಅಂಚೆಚೀಟಿ ಬಿಡುಗಡೆಗೊಳಿಸಿದೆ.

ಜಿಲ್ಲೆಯ ಉಡುಪಿ, ಮಣಿಪಾಲ ಹಾಗೂ ಕುಂದಾಪುರ ಪ್ರಧಾನ ಅಂಚೆ ಕಚೇರಿಗಳಲ್ಲಿ ಅಂಚೆಪತ್ರ ಹಾಗೂ ಅಂಚೆ ಪರಿಕರಗಳಿಗೆ ಅಂಚೆ ಮೊಹರು ಮುದ್ರಿಸಲಾಯಿತು.

ಕುಂದಾಪುರ ಅಂಚೆ ಕಚೇರಿಯಲ್ಲಿ ಯೋಗ ಮತ್ತು ಯೋಗದಿಂದಾಗುವ ಪ್ರಯೋಜನಗಳ ಕುರಿತು ಯೋಗ ಪರಿಣಿತ, ಹಿರಿಯ ಅಂಚೆ ಉದ್ಯೋಗಿ ಎಚ್. ಕೆ ಭಾಸ್ಕರ ಶೆಟ್ಟಿ ಮಾಹಿತಿ ನೀಡಿದರು.

ಈ ಮೂರು ಪ್ರಧಾನ ಅಂಚೆ ಕಚೇರಿಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಅಂಗವಾಗಿ ಸಾರ್ವಜನಿಕರ ವೀಕ್ಷಣೆಗೆ ಯೋಗ ಮಾಹಿತಿ ಬಿತ್ತರಿಸುವ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್ ಚಂದರ್ ನೇತೃತ್ವದಲ್ಲಿ ಸಹಾಯಕ ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿ ಹಾಗೂ ಕೃಷ್ಣರಾಜ ವಿಠಲ ಭಟ್ ಅವರು ಮಣಿಪಾಲ ಮಾಹೆ ಯೋಗ ವಿಭಾಗ ಮುಖ್ಯಸ್ಥೆ ಡಾ. ಅನ್ನಪೂರ್ಣ ಆಚಾರ್ಯ ಹಾಗೂ ನಗರದ ಹಿರಿಯ ಅಂಚೆಚೀಟಿ ಸಂಗ್ರಾಹಕ ಕೃಷ್ಣಯ್ಯ ನಿವಾಸಕ್ಕೆ ತೆರಳಿ ಯೋಗ ದಿನದ ಸ್ಪೆಷಲ್ ಕ್ಯಾನ್ಸಲೇಷನ್ ಮಾಡಿದ ಕವರ್ ಮತ್ತು ಪೋಸ್ಟ್ ಕಾರ್ಡ್ ನೀಡಿ ಗೌರವಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!