ಸುದ್ದಿಕಿರಣ ವರದಿ
ಮಂಗಳವಾರ, ಜನವರಿ 4, 2022
ರಾಮನಗರ ಘಟನೆಗೆ ಖಂಡನೆ
ಉಡುಪಿ: ರಾಮನಗರದಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಮ್ಮುಖದಲ್ಲೇ ಸಂಸದ ಡಿ.ಕೆ. ಸುರೇಶ್ ಅವರ ಗೂಂಡಾ ವರ್ತನೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಖಂಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಹತಾಶಗೊಂಡಿಗದ್ದು, ಮುಖ್ಯಮಂತ್ರಿ ಮುಂದೆಯೇ ವೇದಿಕೆಯಲ್ಲಿ ಸಚಿವರಿಗೆ ಭಾಷಣ ಮಾಡಲು ಅವಕಾಶ ನೀಡದೆ ಏರುಧ್ವನಿಯಲ್ಲಿ ತೀರಾ ಕೆಳಮಟ್ಟದ ರಾಜಕಾರಣವನ್ನು ಸಂಸದ ಡಿ.ಕೆ. ಸುರೇಶ್ ಮಾಡಿದ್ದಾರೆ.
ರಾಜ್ಯದ ಜನತೆ ಈ ಎಲ್ಲಾ ಘಟನೆಗಳನ್ನು ಗಮನಿಸುತ್ತಿದ್ದು ಇಂಥ ಗೂಂಡಾ ವರ್ತನೆಗೆ ತಕ್ಕ ಉತ್ತರವನ್ನು ಮುಂದಿನ ದಿನಗಳಲ್ಲಿ ನೀಡಲಿದ್ದಾರೆ ಎಂದು ನಯನಾ ಗಣೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.