Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ರಿಕ್ಷಾ ನಿಲ್ದಾಣ ಉದ್ಘಾಟನೆ

ರಿಕ್ಷಾ ನಿಲ್ದಾಣ ಉದ್ಘಾಟನೆ

ಉಡುಪಿ: ಯಶೋದ ಆಟೋ ಚಾಲಕರು ಮತ್ತು ಮಾಲಕರ ಸಂಘ ಆಶ್ರಯದ ರಿಕ್ಷಾ ನಿಲ್ದಾಣವನ್ನು ಮಣಿಪಾಲ ರಾಜೀವ ನಗರದಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಉದ್ಘಾಟಿಸಿದರು.

ನಿಲ್ದಾಣವನ್ನು ದಾನಿಗಳಿಂದ ನಿರ್ಮಿಸಲಾಗಿತ್ತು.

`ನಾನು ಕಳೆದ 25 ವರ್ಷದಿಂದ ರಿಕ್ಷಾ ಚಾಲಕರ ಅಭಿಮಾನಿ. ಯಾರೂ ಮಾಡದ ಅತ್ಯುತ್ತಮ ಸಾಮಾಜಿಕ ಕೆಲಸ ಆಟೋ ಚಾಲಕರು ಮಾಡುತ್ತಿದ್ದಾರೆ ಎಂದು ಅಭಿನಂದಿಸಿದರು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಗ್ರಾ. ಪಂ. ಸದಸ್ಯೆ ಗ್ಲೋಸಿ ಮಾರ್ಗರೆಟ್, ಉದ್ಯಮಿ ದಿನೇಶ್ ಶೆಟ್ಟಿ, ನಿಲ್ದಾಣ ಅಧ್ಯಕ್ಷ ಪ್ರಮೋದ್ ಸಾಲಿಯನ್, ಯಶೋದ ಆಟೋ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಂಜಿಬೆಟ್ಟು, ಹರೀಶ್ ಅಮೀನ್, ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ ಕಪ್ಪೆಟ್ಟು, ತಾಲೂಕು ಅಧ್ಯಕ್ಷ ಉದಯ್ ಪಂದುಬೆಟ್ಟು, ಉಪಾಧ್ಯಕ್ಷ ಸಂತೋಷ್ ಶೇರಿಗಾರ್, ರವಿ ಸೇರಿಗಾರ್, ರಾಮ ಕಟ್ಟೆಗುಡ್ಡೆ, ಬಶೀರ್, ಸಚಿನ್ ಮೊದಲಾದವರಿದ್ದರು.

ಸುಧೀರ್ ನಾಯಕ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!