Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ರೋಟರಿ ಉಡುಪಿ ವತಿಯಿಂದ ಸನ್ಮಾನ

ರೋಟರಿ ಉಡುಪಿ ವತಿಯಿಂದ ಸನ್ಮಾನ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 1

ರೋಟರಿ ಉಡುಪಿ ವತಿಯಿಂದ ಸನ್ಮಾನ
ಉಡುಪಿ: ರೋಟರಿ ಉಡುಪಿ ವತಿಯಿಂದ 2022- 23ನೇ ಸಾಲಿನ ಸೇವಾ ಯೋಜನೆಗಳ ಉದ್ಘಾಟನೆ ಶುಕ್ರವಾರ ಕಡಿಯಾಳಿ ಶ್ರೀ ಮಹಿಷಮರ್ದಿನಿ ರೋಟರಿ ಸ್ಕೌಟ್ ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವೈದ್ಯರ ದಿನ, ಪತ್ರಿಕಾ ದಿನ ಹಾಗೂ ಲೆಕ್ಕಪರಿಶೋಧಕರ ದಿನ ಅಂಗವಾಗಿ ಅನುಕ್ರಮವಾಗಿ ಡಾ. ಜಯಂತ ಕುಮಾರ್, ವಿಜಯ ಕರ್ನಾಟಕ ಉಡುಪಿ ಜಿಲ್ಲಾ ವರದಿಗಾರ ಸುಬ್ರಹ್ಮಣ್ಯ ಗಣಪತಿ ಕುರ್ಯ (ಎಸ್. ಜಿ. ಕುರ್ಯ) ಹಾಗೂ ಲೆಕ್ಕಪರಿಶೋಧಕ ಅನಂತ ನಾರಾಯಣ ಪೈ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಜಿಲ್ಲೆ 3182 ಗವರ್ನರ್ ಡಾ. ಎಚ್. ಜೆ. ಗೌರಿ ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನ ನೆರವೇರಿಸಿದರು.

ಜೀವ ಸಾರ್ಥಕತೆ ಯೋಜನೆಯಡಿ ದೇಹದಾನಕ್ಕೆ ನೋಂದಣಿ ಮಾಡುವುದೂ ಸಹಿತ ರೋಟರಿ ಧ್ಯೇಯ, ಸೇವಾ ಯೋಜನೆಗಳ ಕುರಿತು ಮಾತನಾಡಿದರು.

ರೋಟರಿ ವಲಯ 4ರ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ, ವಲಯ ತರಬೇತುದಾರ ಡಾ. ಕೆ. ಸುರೇಶ್ ಶೆಣೈ, ವಲಯ 4ರ ಸೇನಾನಿ ರಾಜೇಶ್ ಡಿ. ಪಾಲನ್, ರೋಟರಿ ಉಡುಪಿ ನಿಕಟಪೂರ್ವ ಅಧ್ಯಕ್ಷ ಹೇಮಂತ್ ಯು. ಕಾಂತ್, ಇನ್ನರ್ ವ್ಹೀಲ್ ಅಧ್ಯಕ್ಷತೆ ಶುಭಾ ಎಸ್. ಬಾಸ್ರಿ ಇದ್ದರು.

ಸನ್ಮಾನಿತರನ್ನು ಸೀತಾರಾಮ ತಂತ್ರಿ, ಜೆ. ಗೋಪಾಲಕೃಷ್ಣ ಪ್ರಭು ಮತ್ತು ಅನಂತರಾಮ ಬಲ್ಲಾಳ್ ಪರಿಚಯಿಸಿದರು.

ರೋಟರಿ ಉಡುಪಿ ಅಧ್ಯಕ್ಷ ಸುಬ್ರಹ್ಮಣ್ಯ ಕಾರಂತ ಸ್ವಾಗತಿಸಿದರು. ಚಂದ್ರಶೇಖರ ಅಡಿಗ ನಿರೂಪಿಸಿದರು. ರೋಟರಿ ಉಡುಪಿ ಕಾರ್ಯದರ್ಶಿ ಗುರುರಾಜ್ ಭಟ್ ಟಿ. ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!