Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಲಸಿಕೆ ಕೇಂದ್ರ, ಪಡಿತರ ಕೇಂದ್ರಕ್ಕೆ ಭೇಟಿ

ಲಸಿಕೆ ಕೇಂದ್ರ, ಪಡಿತರ ಕೇಂದ್ರಕ್ಕೆ ಭೇಟಿ

ಲಸಿಕೆ ಕೇಂದ್ರ, ಪಡಿತರ ಕೇಂದ್ರಕ್ಕೆ ಭೇಟಿ

(ಸುದ್ದಿಕಿರಣ ವರದಿ)
ಉಡುಪಿ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಗುರುವಾರ ಉಡುಪಿ ನಗರ ಆರೋಗ್ಯ ಕೇಂದ್ರದ ಕೋವಿಡ್ ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

 

ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ಕೆ. ರಘುಪತಿ ಭಟ್ ಮತ್ತು ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಮೊದಲಾದವರಿದ್ದರು.

ಪಡಿತರ ಕೇಂದ್ರ ಭೇಟಿ
ಬಳಿಕ ಬ್ರಹ್ಮಾವರ ಉನ್ನತಿ ಪಡಿತರ ವಿತರಣೆ ಕೇಂದ್ರಕ್ಕೆ ಸಚಿವೆ ಕರಂದ್ಲಾಜೆ ಭೇಟಿ ನೀಡಿದರು. ಪಡಿತರ ವಿತರಣೆ ವ್ಯವಸ್ಥೆ ಪರಿಶೀಲಿಸಿದ ಅವರು, ನವೆಂಬರ್ ವರೆಗೆ ಉಚಿತ ಪಡಿತರ ವಿತರಿಸುವ ಪ್ರಧಾನಿ ಮೋದಿ ಆಶಯವನ್ನು ಪ್ರಶಂಸಿಸಿದರು.

ಶಾಸಕ ರಘುಪತಿ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಪಕ್ಷ ಪ್ರಮುಖರಾದ ಜ್ಞಾನವಸಂತ ಶೆಟ್ಟಿ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!