Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ವಿದ್ಯಾರ್ಥಿ ಸಂಸತ್ ಚುನಾವಣೆ

ವಿದ್ಯಾರ್ಥಿ ಸಂಸತ್ ಚುನಾವಣೆ

ಸುದ್ದಿಕಿರಣ ವರದಿ
ಬುಧವಾರ, ಜೂನ್ 15

ವಿದ್ಯಾರ್ಥಿ ಸಂಸತ್ ಚುನಾವಣೆ
ಕುಂದಾಪುರ: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಮಹತ್ವವಿದೆ.

ಈ ನಿಟ್ಟಿನಲ್ಲಿ ಇಲ್ಲಿನ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಚಾರ್ಯ ಮೆಮೋರಿಯಲ್ ಹೈಸ್ಕೂಲ್ ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಶಾಲಾ ಸಂಸತ್ ಗೆ ವಿದ್ಯಾರ್ಥಿ ನಾಯಕರ ಆಯ್ಕೆಗಾಗಿ ಚುನಾವಣೆ ನಡೆಯಿತು.

ಆ ಮೂಲಕ ವಿದ್ಯಾರ್ಥಿ ದೆಸೆಯಲ್ಲಿಯೇ ಚುನಾವಣೆ ಪ್ರಕ್ರಿಯೆ ಮಾಹಿತಿ ನೀಡಲು ಯತ್ನಿಸಲಾಯಿತು.

ಪ್ರಕ್ರಿಯೆ ಪರಿಚಯ ಯತ್ನ
ಚುನಾವಣೆಯ ಪ್ರತಿಯೊಂದು ಮಜಲುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ನೈಜ ಚುನಾವಣೆ ಮಾದರಿಯಲ್ಲಿ ಒಂದು ವಾರದ ಮೊದಲೇ ಆರಂಭವಾದ ಚುನಾವಣೆ ಪ್ರಕ್ರಿಯೆ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವುದು, ಚುನಾವಣಾ ಪ್ರಚಾರ, ಕೊನೆಯ ಹಂತದ ಅಭ್ಯರ್ಥಿಗಳ ಆಯ್ಕೆ ಹೀಗೆ ಅನೇಕ ಹಂತಗಳನ್ನು ಒಳಗೊಂಡಿತ್ತು.

ಬೆರಳಿಗೆ ಶಾಯಿ ಹಾಕಿಸಿಕೊಂಡ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ತಮ್ಮ ಅಮೂಲ್ಯವಾದ ಮತವನ್ನು ತಮ್ಮ ನೆಚ್ಚಿನ ಅಭ್ಯರ್ಥಿಗೆ ನೀಡುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

ಕಾಗದ ರಹಿತ ಮತದಾನ
ಇವಿಎಂ ಮಾದರಿಯ ಟ್ಯಾಬ್ ಮೂಲಕ ವಿದ್ಯಾರ್ಥಿಗಳು ಕಾಗದ ರಹಿತ ಮತದಾನ ನಡೆಸಿ ನೈಜ ಚುನಾವಣೆಯ ಅನುಭವ ಪಡೆದರು.

ಅಪರಾಹ್ನದ ವೇಳೆಯಲ್ಲಿ ನಡೆದ ಮೂರು ಸುತ್ತಿನ ಮತ ಎಣಿಕೆಯಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕಿಯಾಗಿ ಸನ್ಮಿತಾ ಮತ್ತು ಸಹಾಯಕ ವಿದ್ಯಾರ್ಥಿ ನಾಯಕನಾಗಿ ಮಹಮದ್ ಹುಸೈಫ್ ಆಯ್ಕೆಯಾದರು.

ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ಸಾತ್ವಿಕ್ ಮತ್ತು ಸಹಾಯಕ ವಿದ್ಯಾರ್ಥಿ ನಾಯಕಿಯಾಗಿ ಶ್ರೀದೇವಿ ಆಯ್ಕೆಯಾದರು.

ಸಂಸ್ಥೆ ಪ್ರಾಂಶುಪಾಲೆ ಚಿಂತನಾ ರಾಜೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭ ಕೆ. ಎನ್., ಸಹಾಯಕ ಮುಖ್ಯ ಶಿಕ್ಷಕ ಚಂದ್ರಶೇಖರ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಸಹಾಯಕ ಮುಖ್ಯ ಶಿಕ್ಷಕಿ ಕವಿತಾ ಭಟ್ ಮಾರ್ಗದರ್ಶನದಲ್ಲಿ ಇನ್ನಿತರ ಚುನಾವಣಾ ಸಮಿತಿ ಶಿಕ್ಷಕರ ಸಹಯೋಗದೊಂದಿಗೆ ವಿದ್ಯಾರ್ಥಿ ಚುನಾವಣೆ ಸಂಪನ್ನಗೊಂಡಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!