Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ಅಶಿಸ್ತಿನ ವರ್ತನೆ ಮುಂದುವರಿದಲ್ಲಿ ಶಿಸ್ತು ಕ್ರಮ ಅನಿವಾರ್ಯ

ಅಶಿಸ್ತಿನ ವರ್ತನೆ ಮುಂದುವರಿದಲ್ಲಿ ಶಿಸ್ತು ಕ್ರಮ ಅನಿವಾರ್ಯ

ಸುದ್ದಿಕಿರಣ ವರದಿ
ಶುಕ್ರವಾರ, ಜನವರಿ 28

ಅಶಿಸ್ತಿನ ವರ್ತನೆ ಮುಂದುವರಿದಲ್ಲಿ ಶಿಸ್ತು ಕ್ರಮ ಅನಿವಾರ್ಯ
ಉಡುಪಿ: ರಾಜ್ಯ ಸರಕಾರದ ಆದೇಶ ಉಲ್ಲಂಘಿಸಿ ಮತ್ತೆ ಅಶಿಸ್ತು ತೋರಿದರೆ ಎಂಟು ಮಂದಿ ವಿದ್ಯಾರ್ಥಿನಿಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಬರಬಹುದು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಎಚ್ಚರಿಸಿದ್ದಾರೆ.

ಹಿಜಾಬ್ ಧರಿಸದೆ ತರಗತಿಗೆ ಬರಲು ಸಿದ್ಧರಿಲ್ಲ, ಆನ್ ಲೈನ್ ಶಿಕ್ಷಣಕ್ಕೆ ನೀಡಿದ ಅವಕಾಶವನ್ನೂ ಬಳಸುವುದಿಲ್ಲ ಎನ್ನುವ ನೆಲೆಯಲ್ಲಿ ಕಲಿಯಲು ಮನಸ್ಸಿಲ್ಲದಿದ್ದರೆ ಬೇರೆಡೆ ಹೋಗಿ ಕಲಿಯಬಹುದು. ಧಾರ್ಮಿಕ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಅದಕ್ಕೆಲ್ಲಾ ಅವಕಾಶವಿದೆ. ಕೇವಲ ಎಂಟು ಮಂದಿ ವಿದ್ಯಾರ್ಥಿನಿಯರಿಗಾಗಿ ಎಲ್ಲರೂ ಒಪ್ಪಿದ ಕಾಲೇಜು ನಿಯಮ ಬದಲಾಯಿಸಲಾಗದು.

ಯಾರದೋ ಕುಮ್ಮಕ್ಕಿಗೆ ಒಳಗಾಗಿ ವಿದ್ಯಾರ್ಥಿನಿಯರು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಮುಗ್ಧ ಪೋಷಕರ ಜೊತೆಗೆ ಮಕ್ಕಳ ಹಾದಿ ತಪ್ಪಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿ ಸಂಘಟನೆಗಳು ಮಕ್ಕಳ ಭವಿಷ್ಯವನ್ನು ಬಲಿಕೊಡುವುದು ಸಲ್ಲದು ಎಂದು ಪತ್ರಿಕಾ ಹೇಳಿಕೆಯಲ್ಲಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!