Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಸರ್ವರಿಗೂ ಸೂರು ಯೋಜನೆ ಸಾಕಾರ ಖುಷಿ ತಂದಿದೆ

ಸರ್ವರಿಗೂ ಸೂರು ಯೋಜನೆ ಸಾಕಾರ ಖುಷಿ ತಂದಿದೆ

ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿ ಸ್ವಂತ ಮನೆ ಇಲ್ಲದ ಮತ್ತು ಆರ್ಥಿಕವಾಗಿ ಸಶಕ್ತರಲ್ಲದವರಿಗೆ ಮನೆ ಕಲ್ಪಿಸಲು ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಒಟ್ಟುಗೂಡಿಸಿ ಬಡವರಿಗೂ ಬದುಕುವ ಮತ್ತು ಮನೆಯಲ್ಲಿ ವಾಸಿಸುವ ಹಕ್ಕಿದೆ ಎಂಬ ಆಶಯದಲ್ಲಿ ತನ್ನ ಶಾಸಕತ್ವದ ಅವಧಿಯಲ್ಲಿ ಜಾರಿಗೆ ತಂದಿದ್ದ ಸರ್ವರಿಗೂ ಸೂರು ಯೋಜನೆ ಸಾಕಾರಗೊಂಡಿರುವುದು ಸಂತಸ ತಂದಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ರಾಜಕೀಯ ಹಸ್ತಕ್ಷೇಪವಿಲ್ಲದೆ ಬಂದ ಅರ್ಜಿಗಳನ್ನು ಅಧಿಕಾರಿಗಳ ಮೂಲಕ ತನಿಖೆ ನಡೆಸಿ ಪಾರದರ್ಶಕ ಪ್ರಕ್ರಿಯೆ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಲೇಔಟ್ ಮಾದರಿಯಲ್ಲಿ ಬಹುಮಹಡಿ ಕಟ್ಟಡಲ್ಲಿ ಅಪಾರ್ಟ್ ಮೆಂಟ್ ಕಟ್ಟಿಸಿ ಹಸ್ತಾಂತರಿಸುವ ಯೋಜನೆ ರೂಪಿಸಲಾಗಿತ್ತು.

ಈ ಯೋಜನೆಗೆ ನಗರಕ್ಕೆ ಸಮೀಪವಾಗಿರುವ ಹೆರ್ಗ ಗ್ರಾಮದ ಸುಮಾರು 10 ಎಕ್ರೆ ಭೂಮಿ ಗುರುತಿಸಿ, ಅಲ್ಲಿದ್ದ ಕುಮ್ಕಿ ಸಮಸ್ಯೆಯನ್ನು ರಾಜ್ಯ ಸರಕಾರದ ಮೂಲಕ ಪರಿಹರಿಸಿ, ನಿಯಮದ ಪ್ರಕಾರ 50 ಶೇ. ಮೊತ್ತವನ್ನು ನಗರಸಭೆ ಪಾವತಿಸಬೇಕಿದ್ದರೂ ಅದನ್ನು ರಾಜ್ಯ ಸರಕಾರದಲ್ಲಿ ಮನವಿ ಮಾಡಿ ಉಚಿತವಾಗಿ ನಗರಸಭೆಗೆ ಜಾಗವನ್ನು ಈ ಯೋಜನೆಗೆ ಬಳಸಿಕೊಳ್ಳಲು ಹಸ್ತಾಂತರಿಸಲು ಕ್ರಮವಹಿಸಲಾಗಿತ್ತು.

ಫಲಾನುಭವಿಗಳಿಗೆ ಮನೆ ಹಸ್ತಾಂತರವಾಗುತ್ತಿರುವ ವಿಚಾರ ನನಗೆ ನೆಮ್ಮದಿ ಮತ್ತು ಸಮಾಧಾನ ತಂದಿದೆ ಎಂದು ಪ್ರಮೋದ್ ತಿಳಿಸಿದ್ದಾರೆ.

ಈ ಯೋಜನೆಯನ್ನು ಶಾಸಕ ರಘುಪತಿ ಭಟ್ ಮುಂದುವರಿಸಿದ್ದು, 420 ಮನೆಗಳನ್ನು ನಿರ್ಮಿಸಲಾಗಿದ್ದು, ಹಣ ಪಾವತಿಸಿದ 240 ಮಂದಿ ಫಲಾನುಭವಿಗಳಿಗೆ ಸೋಮವಾರ (ಜೂ. 21) ಚೀಟಿ ಎತ್ತುವ ಮೂಲಕ ಮನೆ ಹಂಚಿಕೆ ಮಾಡಲಾಗುತ್ತಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!